ಪಾಲಿಕೆಯಿಂದ ವಿಶಾಖಪಟ್ಟಣಕ್ಕೆ ಅಧ್ಯಯನ ಸಮಿತಿ

ಪಾಲಿಕೆಯಿಂದ ವಿಶಾಖಪಟ್ಟಣಕ್ಕೆ ಅಧ್ಯಯನ ಸಮಿತಿ

ದಾವಣಗೆರೆ, ಅ.8- ಮಹಾನಗರ ಪಾಲಿಕೆ ವತಿ ಯಿಂದ ಮಹಾಪೌರ ವಿನಾಯಕ ಬಿ.ಹೆಚ್ ಅಧ್ಯಕ್ಷತೆ ಯಲ್ಲಿ ಉಪಮಹಾಪೌರರು, ಸ್ಥಾಯಿ ಸಮಿತಿ ಅಧ್ಯಕ್ಷರು ಗಳು, ಮಹಾನಗರ ಪಾಲಿಕೆ ಸದಸ್ಯರುಗಳು ಮತ್ತು ಅಧಿಕಾರಿಗಳ ನಿಯೋಗವು ಆಂಧ್ರಪ್ರದೇಶದ ವಿಶಾಖ ಪಟ್ಟಣಂ ನಗರಕ್ಕೆ ಅಧ್ಯಯನ ಪ್ರವಾಸ  ಕೈಗೊಂಡು, ಗ್ರೇಟರ್ ವಿಶಾಖಪಟ್ಟಣ ಮಹಾನಗರ ಪಾಲಿಕೆಯ ವತಿ ಯಿಂದ ಅನುಷ್ಟಾನಗೊಳಿಸಲಾಗಿರುವ 24×7 ಜಲಸಿರಿ ನೀರು ಸರಬರಾಜು ಯೋಜನೆಯನ್ನು ವೀಕ್ಷಿಸಿದರು. 

 ವಿಶಾಖಪಟ್ಟಣ ಮಹಾನಗರ ಪಾಲಿಕೆ ವತಿಯಿಂದ ನಿರ್ವಹಿಸಲಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮತ್ತು ಸ್ವಾಪಿಂಗ್ ಕೇಂದ್ರ, ಬೀಚ್ ರಸ್ತೆ, ಉಚಿತ ಆಟೋ ಸೇವೆ ಮತ್ತು ನೀರು ಸರಬರಾಜು ಘಟಕಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು. 

ಈ ಸಂದರ್ಭದಲ್ಲಿ ವಿಶಾಖಪಟ್ಟಣದ ಮಹಾಪೌರರಾದ ಶ್ರೀಮತಿ ಗೋಲಗಾನಿ ಹರಿ ವೆಂಕಟಕುಮಾರಿ, ಉಪಮಹಾಪೌರ ಜಿಯ್ಯಾನಿ ಶ್ರೀಧರ್  ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಬಾನಲ ಶ್ರೀನು ಅವರು ದಾವಣಗೆರೆ ಮಹಾಪೌರರಾದ ವಿನಾಯಕ ಬಿ.ಹೆಚ್. ಹಾಗೂ ಉಪಮಹಾಪೌರರಾದ ಶ್ರೀಮತಿ ಯಶೋಧ ಯಗ್ಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಶ್ರೀಮತಿ ಮೀನಾಕ್ಷಿ ಜಗದೀಶ್,  ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್ ಮತ್ತು ಎಲ್ಲಾ ಸದಸ್ಯರುಗಳನ್ನು ಸನ್ಮಾನಿಸಿದರು.

error: Content is protected !!