ದಾವಣಗೆರೆ, ಅ. 8- ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಅಕ್ಟೋಬರ್ 2023 ರಲ್ಲಿ ಪ್ರಕಟಿಸಿರುವ ವಿಶ್ವದ ಮೊದಲ ಶೇ. 2ರಷ್ಟು ಶ್ರೇಷ್ಠ ವಿಜ್ಞಾನಿಗಳ ಪಟ್ಟಿ ಯಲ್ಲಿ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಮಧುಕೇಶ್ ಜೆ.ಕೆ. ಅವರಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ ದೊರೆತಿದೆ. ಗಣಿತ ಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಮಧುಕೇಶ್, ಜೆ.ಕೊಟ್ರೇಶ್ ಮತ್ತು ಶ್ರೀಮತಿ ಮಂಗಳಾ ಡಿ. ದಂಪತಿ ಪುತ್ರ.
ಮಧುಕೇಶ್ ಅವರನ್ನು ಬಿಇಎ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ವರ್ಗ, ಪ್ರಾಂಶುಪಾಲರಾದ ಶ್ರೀಮತಿ ನೀತಾ ರಂಗಸ್ವಾಮಿ, ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.