ಸಹಕಾರ ಕ್ಷೇತ್ರ ಬೆಳೆದರೆ ದೇಶದ ಅಭಿವೃದ್ಧಿ

ಸಹಕಾರ ಕ್ಷೇತ್ರ ಬೆಳೆದರೆ ದೇಶದ ಅಭಿವೃದ್ಧಿ

ರಾಣೇಬೆನ್ನೂರು ಜೇಸಿಸ್ ಕ್ರೆಡಿಟ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಶ್ರೀನಿವಾಸ ಕಾಕಿ

ರಾಣೇಬೆನ್ನೂರು,ಅ.8- ಸಹಕಾರ ಕ್ಷೇತ್ರವನ್ನು ಬೆಳೆಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಇದಕ್ಕೆ ಸದಸ್ಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ಜೇಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.

ಇಲ್ಲಿನ ಎರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನ ಆವರಣದ ಗಣೇಶೋತ್ಸವ ಮಂಟಪದಲ್ಲಿ ಮೊನ್ನೆ ಜರುಗಿದ ಜೇಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ-ಆಪ್‌ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಯ ವತಿಯಿಂದ ಅನೇಕ ಸಾಲ ಸೌಲಭ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ವಿಕ್ರಮ ಕುಲಕರ್ಣಿ ಹಾಗೂ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಉಪಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ನಿರ್ದೇಶಕರಾದ ಶಿವಾನಂದ ಹಿತ್ತಲಮನಿ, ಎಚ್.ಎನ್.ದೇವಕುಮಾರ, ಭೀಮಣ್ಣ ಕಾಕಿ, ಜಯಣ್ಣ ಕರಡೇರ, ಮಂಜುನಾಥ ಗೋಂದಕರ, ಗದಿಗೆಪ್ಪ ಬಗಾಡೆ, ಲಕ್ಷ್ಮಣ ಕನಕಿ, ಲತಾ ಅತಡಕರ, ಶಶಿಕಲಾ ಮಾಗನೂರ, ಪ್ರಕಾಶ ಗಚ್ಚಿನಮಠ, ಪ್ರಭು ಎಳೆಹೊಳೆ, ಎನ್.ಬಸಪ್ಪ, ವ್ಯವಸ್ಥಾಪಕ ಪ್ರವೀಣ ಸುರಹೊನ್ನಿ, ಸಹಾಯಕ ಪ್ರಕಾಶ ಹಿರೇಕೆರೂರ, ಜೇಸಿಐ ಘಟಕದ ಅಧ್ಯಕ್ಷೆ ಲಕ್ಷ್ಮಿ ಅಡಕಿ, ಸದಸ್ಯರಾದ ವೆಂಕಟೇಶ ಕಾಕಿ, ಸಿದ್ದಪ್ಪ ಅತಡಕರ, ಮೃತ್ಯುಂಜಯ ಮಾಗನೂರ, ನಾರಾಯಣ ಬಿಸಲಹಳ್ಳಿ, ಹರೀಶ ಕೋರ್ಪಡೆ ಹಾಗೂ ಸೊಸೈಟಿಯ ಸದಸ್ಯರು ಇದ್ದರು.

error: Content is protected !!