ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದೇ ಪ್ರಥಮ ಆದ್ಯತೆ

ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದೇ ಪ್ರಥಮ ಆದ್ಯತೆ

ರಾಣೇಬೆನ್ನೂರು ಶಾಸಕ ಪ್ರಕಾಶ್‌ ಕೋಳಿವಾಡ

ರಾಣೇಬೆನ್ನೂರು, ಅ.8- ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಕಂಪನಿ ಯಾವುದೇ ರೀತಿಯಿಂದ ಮೀನಾಮೇಷ ಎಣಿಸಬಾರದು. ರೈತರ ಫಲವತ್ತಾದ ಭೂಮಿ ಪಡೆದು ಹಾಗೂ ಇಲ್ಲಿಯ ಎಥೇಚ್ಛ ನೀರನ್ನು ಪಡೆದು ಸ್ಥಾಪನೆಗೊಂಡಿರುವ ಕಂಪನಿ ಸ್ಥಳೀಯ ರೈತರ ಮಕ್ಕಳಿಗೆ, ಕೃಷಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡುವುದೇ ಕಂಪನಿಯ ಪ್ರಥಮ ಆದ್ಯತೆ ಆಗಬೇಕು ಎಂದು ಶಾಸಕ ಪ್ರಕಾಶ್‌ ಕೋಳಿವಾಡ ಹೇಳಿದರು. 

ಹನುಮನಹಳ್ಳಿ ಹತ್ತಿರ ನಿರ್ಮಾಣಗೊಂಡಿರುವ ಗೋಲ್ಡನ್ ಹ್ಯಾಚರೀಸ್ ಪ್ರೈ. ಲಿ.ನ ಕೋಳಿ ಮಾಂಸ ತಯಾರಿಕಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕೆಗಳು ಬೇಕು. ನಾನೇ ನನ್ನ ಪಿ.ಕೆ.ಕೆ. ಸಂಸ್ಥೆಯ ಮುಖಾಂತರ ಹತ್ತಾರು ಉದ್ಯೋಗ ಮೇಳ ಮಾಡಿ, ಸ್ಥಳೀಯ ಸಾವಿರಾರು ನಿರುದ್ಯೋಗಿ ಯುವಕರಿಗೆ ದೂರದ ಫ್ಯಾಕ್ಟರಿಗಳಲ್ಲಿ ಕೆಲಸ ಕೊಡಿಸಿದ್ದೇನೆ. ಇಂತಹದರಲ್ಲಿ ನನ್ನ ಕ್ಷೇತ್ರದಲ್ಲಿ ಸ್ಥಾಪನೆಯಾಗಿ ರುವ ಈ ಕಂಪನಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ದೊರಕಿಸಿದಿದ್ದರೆ ನಾನು ಶಾಸಕನಾಗಿ ಫಲವೇನು ? ಎಂದು ಪ್ರಶ್ನಿಸಿದರು. 

ಇದೇ ಸಂದರ್ಭದಲ್ಲಿ ಕಂಪನಿ ಪ್ರತಿನಿಧಿ ಗಳೊಂದಿಗೆ ಉದ್ಯೋಗಾಕಾಂಕ್ಷಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ರೈತ ಮುಖಂಡರ ಸಮ್ಮುಖದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸ್ಥಳೀಯ ಯುಕರಿಗೆ ಉದ್ಯೋಗ ನೀಡುವ ಬಗ್ಗೆ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘಟನೆಯ ರವೀಂದ್ರಗೌಡ ಎಫ್.ಪಾಟೀಲ, ಈರಣ್ಣ ಹಲಗೇರಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಕಂಪನಿ ತನ್ನ ಮೊಂಡುತನ ಪ್ರದರ್ಶಸಿದೆ. ಸ್ಥಳೀಯ ಯುವಕರಿಗೇನೆ ಉದ್ಯೋಗ ನೀಡಬೇಕೆಂದು ಠರಾವು ಪಾಸು ಮಾಡಿದ್ದಲ್ಲದೆ, ಉದ್ಯೋಗಾಕಾಂಕ್ಷಿಗಳಿಂದ ಸಾವಿರಾರು ಅರ್ಜಿ ಸ್ವೀಕರಿಸಲಾಯಿತು. 

ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ‘ನಮ್ಮ ಭೂಮಿ, ನಮ್ಮ ಜಲ, ಉದ್ಯೋಗ ಪಡೆಯುವುದು ನಮ್ಮ ಹಕ್ಕು ಎಂದರಲ್ಲದೆ, ಸ್ಥಳೀಯರಿಗೆ ಉದ್ಯೋಗ ಕೊಡಿಸುವ ತನಕ ವಿರಮಿಸುವುದಿಲ್ಲ ಎಂದರು. ಕಂಪನಿ ಮಾತಿಗೆ ತಪ್ಪಿ ನಡೆದರೆ ಕಳೆದ 25 ನೇ ತಾರೀಖಿನಂದು ನಡೆದ ಪ್ರತಿಭಟನೆ ಮತ್ತೆ ಮರುಕಳಸ ಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ನಾವು ಕಂಪನಿ ವಿರೋಧಿಗಳಲ್ಲ, ಕಂಪನಿ ನಡೆಸುತ್ತಿರುವ ಕಂಪನಿಯ ಮಾಲೀಕನಿಗೆ ಗೊತ್ತಿಲ್ಲದೆ ಅಕ್ರಮ ವ್ಯವಹಾರ ಚಟುವಟಿಕೆಗಳ ವಿರೋಧಿಗಳು ಎಂದರಲ್ಲದೆ, ಕಳ್ಳ ಕಾಕರನ್ನು ಈ ಕೂಡಲೇ ಹೊರಹಾಕಬೇಕೆಂದರು. 

ಅಧ್ಯಕ್ಷತೆಯನ್ನು ಕಂಪನಿಯ ಮ್ಯಾನೇಜಿಂಗ್ ಡೈರಕ್ಟರ್ ಸೈಯದ್ ಫಹಾದ್ ವಹಿಸಿದ್ದರು. ವೇದಿಕೆಯ ಮೇಲೆ ಚಂದ್ರಣ್ಣ ಬೇಡರ, ಜನರಲ್ ಮ್ಯಾನೇಜರ್ ಲೋಕೇಶ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೇಖಾ ಎಂ.ಪಟ್ಟಕ್ಕನವರ, ಉಪಾಧ್ಯಕ್ಷೆ ಶ್ರೀಮತಿಗೆ ಚಂದ್ರಮ್ಮ ಹಿರೇಮಠದ, ಅಶೋಕ ಗಂಗನಗೌಡ್ರ, ಹೆಚ್.ಆರ್.ಡಿ. ಭೀಮೇಶ ಉಪಸ್ಥಿತರಿದ್ದರು. 

ಮೂರು ಸಾವಿರಕ್ಕೂ ಹೆಚ್ಚು ಉದ್ಯೋಗಾ ಕಾಂಕ್ಷಿಗಳು ಈ ಸಂದರ್ಭದಲ್ಲಿ ಹಾಜರಿದ್ದು ತಮ್ಮ ಅರ್ಜಿ ಸಲ್ಲಿಸಿದರು. ನಿಯಮಾವಳಿಗಳ ಪ್ರಕಾರ ಸಂದರ್ಶನಕ್ಕೆ ಕರೆಯಲಾಗುವುದೆಂದು ಕಂಪನಿ ಎಂ.ಡಿ. ತಿಳಿಸಿದರು.

error: Content is protected !!