ದಾವಣಗೆರೆ, ಅ. 8- ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾಗಿ ಶ್ರೀಮತಿ ಅಮಿತಾ ಡಾ. ವೇಣುಗೋಪಾಲ್ ಪೈ ಅವರು ಅವಿರೋಧವಾಗಿ ಪುನರಾಯ್ಕೆಯಾ ಗಿದ್ದಾರೆ ಎಂದು ಸಮಾಜದ ಮಾಜಿ ಅಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಇತ್ತೀಚಿಗೆ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಶ್ರೀಮತಿ ಸರೋಜಾ ಶಾನಭಾಗ ಪ್ರಾರ್ಥಿಸಿದರು. ಕೀರ್ತಿ ಕಿಣಿ ಸ್ವಾಗತಿಸಿದರು. ವಾರ್ಷಿಕ ವರದಿ ವಾಚನ ಕೆ. ವೆಂಕಟರಮಣ ಭಟ್ ನಡೆಸಿಕೊಟ್ಟರು. ಆರ್.ವಿ.ಶೆಣೈ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಗಣೇಶ್ ತಿಳ್ವೆ ಕಾರ್ಯಕ್ರಮ ನಿರೂಪಿಸಿದರು. ಕಿರಣ್ಕುಮಾರ್ ವಿ.ಶೆಣೈ ವಂದಿಸಿದರು. 2022-23ನೇ ಸಾಲಿನ 3 ವರ್ಷಗಳ ಅವಧಿಯ ಪದಾಧಿಕಾರಿ ಗಳಾಗಿ ಉಪಾಧ್ಯಕ್ಷರಾಗಿ ಕೆ. ನಿತ್ಯಾನಂದ ಕಾಮತ್, ಕಾರ್ಯದರ್ಶಿಯಗಿ ಕೆ.ವೆಂಕಟ ರಮಣಭಟ್, ಖಜಾಂಚಿಯಾಗಿ ಆರ್.ವಿ.ಶೆಣೈ, ಸಹ ಕಾರ್ಯದರ್ಶಿ ಯಾಗಿ ಕಿರಣ್ಕುಮಾರ್ ವಿ.ಶೆಣೈ ಸಮಿತಿ ಸದಸ್ಯರಾಗಿ ರಾಘವೇಂದ್ರ ಕಾಮತ್, ಎಂ.ನರಸಿಂಹ ಕಾಮತ್, ಕೀರ್ತಿ ಕಿಣಿ, ಶ್ರೀಮತಿಯವರಾದ ಉಷಾ ವಾಲಾ ವಲ್ಕರ್, ರೇಖಾ ಡಿ.ಪ್ರಭು, ಗಣೇಶ್ ಜಿ.ತಿಳ್ವೆ ಅವಿರೋಧವಾಗಿ ಆಯ್ಕೆಯಾದರು.
ಸಮಾಜದ ಮಾಜಿ ಅಧ್ಯಕ್ಷರುಗಳಾದ ಎನ್.ರವಿಚಂದ್ರ ನಾಯಕ್, ಕಿರಣ್ ವಾಲಾವಲ್ಕರ್, ದೇವದಾಸ ಪೈ, ಸಿ.ಪಿ.ಕಾಮತ್ ಮುಂತಾದವರು ಉಪಸ್ಥಿತರಿದ್ದರು.