ಬರದಿಂದ ನಷ್ಟವಾದ ಬೆಳೆಗೆ ಹೆಚ್ಚಿನ ಪರಿಹಾರ ನೀಡಲು ಶಾಸಕ ಬಿ.ದೇವೇಂದ್ರಪ್ಪ ಒತ್ತಾಯ

ಬರದಿಂದ ನಷ್ಟವಾದ ಬೆಳೆಗೆ ಹೆಚ್ಚಿನ ಪರಿಹಾರ ನೀಡಲು ಶಾಸಕ ಬಿ.ದೇವೇಂದ್ರಪ್ಪ ಒತ್ತಾಯ

ಜಗಳೂರು, ಅ.8-  ಮಳೆ ಬಾರದೇ ನಷ್ಟ ಉಂಟಾಗಿರುವ ರೈತರಿಗೆ ಕೇಂದ್ರ ಸರ್ಕಾರ  ಹೆಚ್ಚಿನ ಪರಿಹಾರ ನೀಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕೇಂದ್ರ ಬರ ಅಧ್ಯಯನ ತಂಡಕ್ಕೆ ಒತ್ತಾಯಿಸಿದರು.

ಶನಿವಾರ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ತಾಲ್ಲೂಕಿನ ಹಿರೇಮಲ್ಲನಹೊಳೆ ಕೆರೆ ಬಳಿಯ ಶೇಂಗಾ ಬೆಳೆ, ಭರಮಸಮುದ್ರ ಬಳಿ ಮೆಕ್ಕೆಜೋಳದ ಜಮೀನುಗಳಿಗೆ ಭೇಟಿ ಶಾಸಕರು ಮಾತನಾಡಿದರು.

 ರಾಜ್ಯದ  224 ಕ್ಷೇತ್ರಗಳಲ್ಲಿ ಜಗಳೂರು ತಾಲ್ಲೂಕು  ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕಾಗಿದೆ. ಸ್ವಾತಂತ್ರ್ಯಾ ನಂತರ ಕೇವಲ ನಾಲ್ಕು ವರ್ಷ ಮಾತ್ರ ಬೆಳೆ ಫಸಲು ಉತ್ತಮವಾಗಿ ಬಂದಿದೆ. ಸಾಗುವಳಿ ನಂತರ  ಬೆಳೆಗಳ ಸಾಲಿನಲ್ಲಿ ಕನಿಷ್ಠ 30 ಮಿ.ಮೀ ಮಳೆಯಿಲ್ಲದೆ  ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ. ಸಿಇಒ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪವಿಭಾಗಾಧಿಕಾರಿ  ದುರ್ಗಾಶ್ರೀ,  ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಉಪನಿರ್ದೇಶಕ ಶ್ರೀನಿವಾಸ್, ತೋಟಗಾರಿಕೆ ಇಲಾಖೆ   ರವೀಂದ್ರ ನಾಯ್ಕ್, ತಹಶೀಲ್ದಾರ್ ಅರುಣ್ ಕಾರಗಿ, ಎ.ಡಿ. ತೋಟಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ಸಿಪಿಐ ಶ್ರೀನಿವಾಸ್ ರಾವ್ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!