ರಾಣೇಬೆನ್ನೂರು : ಜಾನಪದ ನೃತ್ಯಗಳ ಉತ್ಸವ

ರಾಣೇಬೆನ್ನೂರು : ಜಾನಪದ ನೃತ್ಯಗಳ ಉತ್ಸವ

ರಾಣೇಬೆನ್ನೂರು, ಅ. 8 – ತಾಲ್ಲೂಕಿನ ಕರೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಜಾನಪದ ನೃತ್ಯಗಳ ಉತ್ಸವ ಜರುಗಿತು.

ನಾಗಪುರದ ಮಧ್ಯಕ್ಷೇತ್ರ ಸಾಂಸ್ಕೃತಿಕ ಕೇಂದ್ರ, ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಹಾಗೂ ಕರೂರು ಗ್ರಾಮ ಪಂಚಾಯತಿ‌ ಸೇರಿದಂತೆ ಗ್ರಾಮಗಳ ಎಲ್ಲಾ ಸಂಘಗಳ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಗ್ರಾಮದ‌‌ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳ‌ ಮೆರವಣಿಗೆ ಜರುಗಿತು. ಉತ್ಸವದಲ್ಲಿ ಪಶ್ಚಿಮ‌ ಬಂಗಾಳ, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಗೋವಾ, ಪಂಜಾಬ್, ಕರ್ನಾಟಕದ ಕಲಾತಂಡಗಳ ಕಲಾವಿದರು ಮೆರಗು ನೀಡಿದರು. 

ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪೂಜಾರ, ಸದಸ್ಯೆ ಶ್ರೀವಾಣಿ ಲೆಕ್ಕಿಕೋಣಿ, ಗೌರಮ್ಮ ಸಣ್ಣಬೊಮ್ಮಜ್ಜಿ, ಆಶಾ ಮಾಯಾಚಾರಿ, ವಸಂತ ವಡ್ಡರ್, ಸವಿತಾ ಹಿರೇಗೌಡರ, ಚೋಳಪ್ಪ ಕಚವಿರವಿ ಹಾಗೂ ಪಿಡಿಒ ಜ್ಯೋತಿ ಕಮ್ಮಾರ, ಕಲಾವಿದ ಪರಶುರಾಮ ಬಣಕಾರ, ತಿಪ್ಪೇಶ ಲೆಕ್ಕಿಕೋಣಿ ಸೇರಿದಂತೆ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

error: Content is protected !!