ಬಿಐಇಟಿಯಲ್ಲಿ ಇಂದು ಅಂತರಿಕ್ಷ ಸಪ್ತಾಹ

ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಾಹಾವಿದ್ಯಾಲಯ ಹಾಗೂ ಇಸ್ರೋದ ಅಂಗ ಸಂಸ್ಥೆ ಯು.ಆರ್.ರಾವ್ ಸೆಟಲೈಟ್ ಸೆಂಟರ್ ಸಹಭಾಗಿತ್ವದಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ವನ್ನು   ಬಿಐಇಟಿ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದೆ.  

ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 9.15 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ರಾಮನಗೌಡ ವೆಂಕನಗೌಡ ನಾಡಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ.ರಾಘವೇಂದ್ರ ಬಿ. ಕುಲಕರ್ಣಿ, ಡಿಡಿಪಿಐ ಬಿ.ಕೊಟ್ರೇಶ್, ಬಿಐಇಟಿ ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್ ಉಪಸ್ಥಿತರಿರಲಿದ್ದಾರೆ.

ಸಮಾರಂಭದ ಅಂಗವಾಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಆಶುಭಾಷಣ ಸ್ಪರ್ಧೆ ಹಾಗೂ ಸ್ಮರಣ ಶಕ್ತಿ ಪರೀಕ್ಷಾ ಸ್ಪರ್ಧೆಗಳನ್ನು ಇಸ್ರೋದ ಯು.ಆರ್.ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿಗಳು ಆಯೋಜಿಸಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

error: Content is protected !!