ದಾವಣಗೆರೆ, ಅ. 6 – ಕರ್ನಾಟಕ ಕ್ರೀಡಾ ಪ್ರಾಧಿಕಾರ (ಬೆಂಗಳೂರು)ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ದಾವಣಗೆರೆ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2023- 24 ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಎಂಟು ಜಿಲ್ಲೆಗಳು ಆಗಮಿಸಿದ್ದವು.
ಮಹಿಳೆಯರ ವಿಭಾಗದಲ್ಲಿ ಫೈನಲ್ ಪಂದ್ಯ ದಾವಣಗೆರೆ ಹಾಗೂ ಶಿವಮೊಗ್ಗ ತಂಡದ ನಡುವೆ 29-15 ಅಂಕಗಳ ಅಂತರದಿಂದ ದಾವಣಗೆರೆ ತಂಡ ಪ್ರಥಮ ಸ್ಥಾನ ಪಡೆದಿರುತ್ತದೆ ಹಾಗೂ ಶಿವಮೊಗ್ಗ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ.
ಪುರುಷರ ವಿಭಾಗದಲ್ಲಿ ಫೈನಲ್ ಪಂದ್ಯ ದಾವಣಗೆರೆ ಹಾಗೂ ಬೆಂಗಳೂರು ಗ್ರಾಮಾಂತರ ನಡುವೆ 51-38 ಅಂಕಗಳ ಅಂತರದಿಂದ ದಾವಣಗೆರೆ ತಂಡ ಜಯ ಗಳಿಸಿದೆ. ತಂಡಗಳಿಗೆ ಬಹುಮಾನ ವಿತರಿಸಿದ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಗೌರವಾಧ್ಯಕ್ಷ ರಾಮಮೂರ್ತಿ ಸಿ., ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷರೂ ಆದ 38ನೇ ವಾರ್ಡಿನ ಕಾರ್ಪೊರೇಟರ್ ಗಡಿಗುಡಾಳ್ ಮಂಜುನಾಥ್, ಕಾರ್ಯದರ್ಶಿ ವೀರೇಶ್ ಆರ್., ಖಜಾಂಜಿ ಪ್ರಸನ್ನ, ತರಬೇತುದಾರ ದರ್ಶನ್ ಹಾಗೂ ಸಚಿನ್ ತಂಡಗಳಿಗೆ ಬಹುಮಾನಗಳನ್ನು ನೀಡಿದರು.