ದಾವಣಗೆರೆ, ಅ.6- ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಯ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗ: ಟೆನ್ನಿಸ್, ವಾಲಿ ಬಾಲ್ನಲ್ಲಿ ಅವನೀಶ್ ಡಿ. ಹೆಚ್, ವಿದ್ಯಾನಿಧಿ ಮತ್ತು ಸಿದ್ದೇಶ ಪ್ರಥಮ, ಕರಾಟೆಯಲ್ಲಿ ಗಣೇಶ್ ಪ್ರಥಮ ಮತ್ತು ಮಧು ದ್ವಿತೀಯ, ಚೆಸ್ನಲ್ಲಿ ಆದಿತ್ಯ ದೀಪಕ್ ಕುಮಾರ್ ಪ್ರಥಮ ಮತ್ತು ಶ್ರೀಕಾಂತ್ ದ್ವಿತೀಯ, ನೆಟ್ಬಾಲ್ನಲ್ಲಿ ಪ್ರೀತಂ ತಂಡ ಪ್ರಥಮ ಸ್ಥಾನ ಗಳಿಸಿದೆ.ಯೋಗ ಸ್ಪರ್ಧೆಯಲ್ಲಿ ನವೀನ್ ದ್ವಿತೀಯ ಮತ್ತು ಪ್ರೀತಂ ಹಾಗೂ ಶಿವರಾಜ್ ತೃತೀಯ ಸ್ಥಾನ ಪಡೆದಿರುತ್ತಾರೆ.
ಬಾಲಕಿಯರ ವಿಭಾಗ: ಟೆನ್ನಿಸ್, ವಾಲಿಬಾಲ್ನಲ್ಲಿ ಸುಪ್ರಿಯಾ, ಶ್ರೀನಿಧಿ ಹಂಸ ಮತ್ತು ಕವನ ಪ್ರಥಮ, ಕರಾಟೆಯಲ್ಲಿ ರಕ್ಷಾ ಜಿ. ಆರ್. ಪ್ರಥಮ. ಸ್ವಿಮ್ಮಿಂಗ್ನಲ್ಲಿ ಚಿನ್ಮಯ್ ಪ್ರಥಮ. ಯೋಗ ಸ್ಪರ್ಧೆಯಲ್ಲಿ ಸುಪ್ರಿಯ ಮತ್ತು ಮಾನ್ಯ ದ್ವಿತೀಯ, ದೀಪ್ತಿ ತೃತೀಯ. ವಾಲಿಬಾಲ್ನಲ್ಲಿ ಸುಪ್ರಿಯಾ ಪ್ರಥಮ.
ಕ್ರೀಡಾಪಟುಗಳನ್ನು ಸಿದ್ದಗಂಗಾ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೌಜ, ನಿರ್ದೇಶಕ ಡಾ.ಜಯಂತ್, ಕಾರ್ಯದರ್ಶಿ ಶಿವಣ್ಣ, ಪ್ರಾಂಶುಪಾಲರಾದ ವಾಣಿಶ್ರೀ, ದೈಹಿಕ ಶಿಕ್ಷಣ ನಿರ್ದೇಶಕ ರಘು ಹೆಚ್.ಎಂ, ಶ್ರೀನಿವಾಸ್, ಸುನೀತ ಅಭಿನಂದಿಸಿದ್ದಾರೆ.