ಬಾಲ್ಯದಲ್ಲಿನ ಮೌಲ್ಯಗಳು ಭವಿಷ್ಯಕ್ಕೆ ಬುನಾದಿ

ಬಾಲ್ಯದಲ್ಲಿನ ಮೌಲ್ಯಗಳು ಭವಿಷ್ಯಕ್ಕೆ ಬುನಾದಿ

ದಾವಣಗೆರೆ, ಅ. 5- ಬಾಲ್ಯದಲ್ಲಿ ಬಿತ್ತುವ ಮೌಲ್ಯಗಳು ಭವಿಷ್ಯಕ್ಕೆ ಬುನಾ ದಿಯಾಗಲಿದ್ದು, ವೇತನ ವ್ಯಾಪ್ತಿಯನ್ನೂ ಮೀರಿ ತಮ್ಮ ಜ್ಞಾನವನ್ನು ಮಕ್ಕಳ ಮೂಲಕ ಸಮಾಜಕ್ಕೆ ನೀಡುವ ಜವಾಬ್ದಾರಿ ಶಿಕ್ಷಕರದ್ದು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ಹೇಳಿದರು.

ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಜ್ಞಾನಜ್ಯೋತಿ ಶಿಕ್ಷಕಿಯರ ವೇದಿಕೆ ಸಹಯೋಗದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕಳೆದ ವಾರ ಹಮ್ಮಿಕೊಂಡಿದ್ದ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಜೀವನದಲ್ಲಿ ಮೌಲ್ಯ ಗಳು ಮುಖ್ಯವಾಗಿದ್ದು, ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಅದು ಮೌಲ್ಯವಾಗುತ್ತದೆ. ಮಕ್ಕಳ ಭವಿಷ್ಯ ರೂಪಿಸುವ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಅಳಿಸಲಾಗದ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ ಎಂದರು.

ಈಶ್ವರಮ್ಮ ಶಾಲೆಯ ಪ್ರಾಂಶು ಪಾಲ ಕೆ.ಎಸ್. ಪ್ರಭುಕುಮಾರ್ ಮಾತನಾಡಿ, ಮೌಲ್ಯಗಳೇ ನಶಿಸಿ ಹೋಗುತ್ತಿರುವ ಪ್ರಸ್ತುತ ಸಂದ ರ್ಭದಲ್ಲಿ ಕೇವಲ ಅಂಕ ಗಳಿಕೆಗಿಂತ ಮೌಲ್ಯ ಗಳಿಕೆಯ ಬಗ್ಗೆ ಚಿಂತಕರು ಹಾಗೂ ಶಿಕ್ಷಣ ಸಂಸ್ಥೆಗಳು ಗಮನಹರಿಸಬೇಕಾಗಿದೆ ಎಂದರು.

ಶಿಕ್ಷಕರಿಗೆ ಮೌಲ್ಯಯುತ ಶಿಕ್ಷಣ ಕುರಿತ ಕಾರ್ಯಾಗಾರಗಳನ್ನು ಹೆಚ್ಚು ಹೆಚ್ಚು ತಲುಪಿಸುವ ವ್ಯವಸ್ಥೆಯಾಗ ಬೇಕಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಕೆ.ಆರ್. ಸುಜಾತಕೃಷ್ಣ ಮಾತನಾಡಿ, ಈಶ್ವರಮ್ಮ ವಿದ್ಯಾಸಂಸ್ಥೆಯು ಕಳೆದ 40 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದೆ ಎಂದು ತಿಳಿಸಿದರು.

ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವುದರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈಶ್ವರಮ್ಮ ಶಾಲೆಯ ಸಂಸ್ಥಾಪಕರೂ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ದಿ. ಬಿ.ಆರ್. ಶಾಂತಕುಮಾರಿ ಸ್ಮರಣಾರ್ಥವಾಗಿ ಈ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಪ್ರತಿ ವರ್ಷವೂ ನೂರಾರು ಶಿಕ್ಷಕರಿಗೆ ಆಯೋಜನೆ ಮಾಡುತ್ತಾ ಬರುತ್ತಿದೆ ಎಂದರು.

ಮಕ್ಕಳ ಮುಗ್ದ ಮನಸ್ಸಿನಲ್ಲಿ ನಶಿಸಿ ಹೋಗದಂತಹ ಮೌಲ್ಯಗಳನ್ನು ಬಿತ್ತಿ ಮಕ್ಕಳ ಭವಿಷ್ಯಕ್ಕೆ ಬೆಳಕು ಚೆಲ್ಲಿ ಸುಂದರ ನಾಡು ಕಟ್ಟುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಇದೇ ವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಡಾ. ಪುಷ್ಪಲತಾ, ನಿವೃತ್ತ ಪ್ರಾಧ್ಯಾಪಕ ರಾದ ಮಲ್ಲಮ್ಮ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಎ.ಪಿ. ಸುಜಾತ, ಕೆ.ವಿ. ಸುಜಾತ, ಕೆ.ಎಂ. ಗಿರಿಜಾ, ಬಿ. ಶ್ರೀದೇವಿ, ಎಸ್.ಎಸ್.ಸಂಗೀತ, ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಅಧ್ಯಕ್ಷೆ ಜಿ.ಎಸ್. ಶಶಿರೇಖಾ, ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಈಶ್ವರಮ್ಮ ಟ್ರಸ್ಟ್ ಕಾರ್ಯ ದರ್ಶಿ ಜಿ.ಆರ್. ವಿಜಯಾನಂದ ಇತರರಿದ್ದರು.

error: Content is protected !!