ಸವಿತಾ ಕ್ರೆಡಿಟ್ ಸೊಸೈಟಿಗೆ 14 ಲಕ್ಷ ಲಾಭ

ಸವಿತಾ ಕ್ರೆಡಿಟ್ ಸೊಸೈಟಿಗೆ 14 ಲಕ್ಷ ಲಾಭ

23ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎನ್. ರಂಗಸ್ವಾಮಿ ಸಂತಸ

ದಾವಣಗೆರೆ, ಅ. 5- ಪ್ರಗತಿಯನ್ನು ಕಾಯ್ದುಕೊಂಡು ಮುನ್ನಡೆದಿರುವ ಸ್ಥಳೀಯ ಸವಿತಾ ಪತ್ತಿನ ಸಹಕಾರಿ ಸಂಘವು ನಗರದ ಮುಂಚೂಣಿಯಲ್ಲಿರುವ ಸಹಕಾರಿ ಸಂಸ್ಥೆಗಳಲ್ಲೊಂದಾಗಿದೆ ಎಂದು ವಕೀಲರೂ ಆಗಿರುವ ಸಂಘದ ಅಧ್ಯಕ್ಷ ಎನ್ . ರಂಗಸ್ವಾಮಿ ಸಂತಸ ವ್ಯಕ್ತಪಡಿಸಿದರು. 

ಇಲ್ಲಿನ ಶ್ರೀ ಚನ್ನಗಿರಿ ವಿರು ಪಾಕ್ಷಪ್ಪ ಧರ್ಮಶಾಲಾದಲ್ಲಿ  ಏರ್ಪಾ ಡಾಗಿದ್ದ ಸವಿತಾ ಪತ್ತಿನ ಸಹಕಾರ ಸಂಘದ 23ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2023 ಮಾರ್ಚ್ ಅಂತ್ಯಕ್ಕೆ 1736 ಜನ ಸದಸ್ಯರುಗಳ ಈ ಸಂಘವು 50 ಲಕ್ಷ ರೂ.  ಷೇರು ಬಂಡವಾಳದೊಂದಿಗೆ 3.53 ಕೋ ಟಿ ರೂ. ಠೇವಣಿ ಸಂಗ್ರಹಿಸಲಾಗಿದ್ದು, ಸದಸ್ಯರುಗಳಿಗೆ ಅವರ ಅಗತ್ಯಕ್ಕನು ಗುಣವಾಗಿ 3.30 ಕೋಟಿ ರೂ. ಸಾಲ-ಸೌಲಭ್ಯ ಒದಗಿಸಲಾಗಿದೆ.

14.91 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಪ್ರಗತಿಯನ್ನು ಅಂಕಿ-ಅಂಶಗಳೊಂ ದಿಗೆ ರಂಗಸ್ವಾಮಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಶೇ. 60 ಕ್ಕು ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತರಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು. ಅಲ್ಲದೇ, ಸವಿತಾ ಸಮು ದಾಯ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಜಿ.ವಿ. ಶಾಂತ ಕುಮಾರ್, ರಾಂಪುರ ರಮೇಶ್, ಎನ್. ಗೋವಿಂದರಾಜು, ಕೆ.ಆನಂದ್, ಹೆಚ್.ಜಯಪ್ರಕಾಶ್, ಹೆಚ್.ಲಕ್ಷಣ್, ಶ್ರೀಮತಿ ಬಾಲ ನಾಗಮ್ಮ, ಪ್ರೊ|| ರಾಜೇಶ್ವರಿ, ಪಿ.ತಿಪ್ಪೇಸ್ವಾಮಿ ರವರನ್ನು ಸನ್ಮಾನಿಸುವುದರ ಮೂಲಕ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಜಿ.ಸಿ.ಶ್ರೀನಿವಾಸ್ ಮಾತನಾಡಿ, ಸಂಘದ ಆಡಳಿತ ಮಂಡಳಿ ಸದಸ್ಯರ ಶ್ರಮ, ಸಿಬ್ಬಂದಿ ವರ್ಗದವರ ಕಾರ್ಯ ಶೀಲತೆ, ಸದಸ್ಯರ ಮತ್ತು ಗ್ರಾಹಕರ ಪ್ರೋತ್ಸಾಹ, ಠೇವಣಿದಾರರ ವಿಶ್ವಾಸಾರ್ಹತೆ, ಸಾರ್ವಜನಿಕರ ನಂಬಿಕೆಯಿಂದಾಗಿ ಈ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು  ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಿ. ವೆಂಕಟೇಶ್ ನಾಯ್ಕ್ ಅವರು ಸಭೆಗೆ ಮಂಡಿಸಿ ದರು. ನಿವ್ವಳ ಲಾಭದ ಹಂಚಿಕೆ ಯನ್ನು ನಿರ್ದೇಶಕ ಎನ್. ಗೋವಿಂದರಾಜು ಮಂಡಿಸಿದರು. 2022-2023ನೇ ಸಾಲಿನ ಅಂದಾಜಿಗಿಂತ  ಹೆಚ್ಚುವರಿಯಾದ ಖರ್ಚುಗಳನ್ನು ನಿರ್ದೇಶಕ ಎಮ್. ಸೋಮಶೇಖರಪ್ಪ ಮಂಡಿಸಿದರು. ಲಾಭ-ನಷ್ಟದ ತಃಖ್ತೆಯನ್ನು ನಿರ್ದೇ ಶಕ ಸಿ. ರಾಮಾಂಜನೇಯ ಮಂಡಿಸಿ ದರು. 2023-2024ನೇ ಅಂದಾಜು ಆಯ-ವ್ಯಯವನ್ನು ನಿರ್ದೇಶಕ ವಿ. ಎಸ್. ಕೇಶವಮೂರ್ತಿ ಮಂಡಿಸಿದರು.

ಸಂಘದ ನಿರ್ದೇಶಕರುಗಳಾದ ಜೆ.ಮಂಜುನಾಥ್, ಶ್ರೀಮತಿ  ಸುವರ್ಣ ಗಂಗಾಧರ್, ಶ್ರೀಮತಿ ಶೋಭಾ ಸುರೇಶ್, ಬಿ.ಕೆ. ಸುರೇಶ್, ಜಿ. ಶ್ರೀನಿವಾಸ್, ಕೆ. ಆನಂದ್, ವಿಶೇಷ ಆಹ್ವಾನಿತರಾದ ಎಸ್. ಸವಾರಪ್ಪ, ಟಿ. ತಿಪ್ಪೇಸ್ವಾಮಿ, ಜಿ.ಕರಿಯಪ್ಪ, ಎನ್. ರಾಜು ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎನ್. ಮಂಜುನಾಥ್ ಅವರ ಪ್ರಾರ್ಥನೆ ನಂತರ ಜಿ.ಎಸ್.ಪರಶು ರಾಮ್ ಸ್ವಾಗತಿಸಿದರು. ಆರ್.ಕರಿಬ ಸಪ್ಪ ವಂದಿಸಿದರು. ಸಿ. ರಾಘ ವೇಂದ್ರ, ಎನ್. ರಾಮಚಂದ್ರಪ್ಪ, ಆರ್. ಯಶವಂತ ರಾಜ್, ಕೆ.ಜೆ.ಅಜಯ್ ಅವರುಗಳು ಕಾರ್ಯ ಕ್ರಮದ ಉಸ್ತುವಾರಿ ವಹಿಸಿದ್ದರು.

error: Content is protected !!