ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಶಿಕ್ಷಕರಿಗೂ ಪ್ರತಿಭೆ ಮುಖ್ಯ

ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಶಿಕ್ಷಕರಿಗೂ ಪ್ರತಿಭೆ ಮುಖ್ಯ

ಮಲೇಬೆನ್ನೂರು ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೃಷ್ಣಪ್ಪ ಅಭಿಮತ

ಮಲೇಬೆನ್ನೂರು, ಅ.4- ಮಕ್ಕ ಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರಿಗೂ ಪ್ರತಿಭೆ ಇರಬೇಕು. ಮಕ್ಕಳ ನಿಜವಾದ ಪ್ರತಿಭೆ ಗುರುತಿಸು ವಿಕೆಯಿಂದ ಅಂತಹ ಮಕ್ಕಳು ದೇಶದ ಆಸ್ತಿಗಳಾಗುತ್ತಾರೆ ಎಂದು ಹರಿಹರ ತಾ. ಕ್ಷೇತ್ರ ಸಮನ್ವಯಾಧಿಕಾರಿ ಹೆಚ್‌. ಕೃಷ್ಣಪ್ಪ ಹೇಳಿದರು.

ಪಟ್ಟಣದ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ಮಲೇಬೆನ್ನೂರು ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಲ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಕ್ಕಳಲ್ಲಿರುವ ಸೂಕ್ಷ್ಮ ಪ್ರತಿಭೆಯನ್ನು ಪತ್ತೆ ಹಚ್ಚುವ ಶಕ್ತಿಯನ್ನು ನಮ್ಮ ಶಿಕ್ಷಕರು ಬೆಳೆಸಿಕೊಳ್ಳಬೇಕು. ಮಕ್ಕಳ ಪ್ರತಿಭೆಗೆ ಧಕ್ಕೆ ಬರದಂತೆ ಫಲಿತಾಂಶ ಅಥವಾ ತೀರ್ಪು ನೀಡಬೇಕೆಂದು ಕೃಷ್ಣಪ್ಪ ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಹರಿಹರ ಸಿಆರ್‌ಪಿ ಎಸ್‌.ಎನ್‌. ರೂಪಾ, ಮಲೇಬೆನ್ನೂರು ಸಿಆರ್‌ಪಿ ಕೆ.ಜಿ. ನಂಜುಂಡಪ್ಪ, ಎಸ್‌ಡಿಎಂಸಿ ಸದಸ್ಯರಾದ ಪವನ್‌ ದೇಶ್‌ ಪಾಂಡೆ, ಯೋಗೇಶ್‌ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳಿಗೆ ವರದಾನವಾಗಿದೆ ಎಂದರು.

ಈ ವೇಳೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಎಸ್‌ಬಿಕೆಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರಸಭೆ ಸದಸ್ಯರಾದ ಶ್ರೀಮತಿ ಸುಲೋಚನಮ್ಮ ಓ.ಜಿ. ಕುಮಾರ್‌, ಗೌಡ್ರ ಮಂಜಣ್ಣ, ತಾ. ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಸಾಕಮ್ಮ, ಶಿಕ್ಷಣ ಸಂಯೋಜಕ ಹರೀಶ್‌ ನೋಟಗಾರ್‌, ಬಿಆರ್‌ಪಿಗಳಾದ ಕೆ. ವೀರಪ್ಪ, ಚನ್ನವೀರಯ್ಯ ಹಿರೇಮಠ್‌, ಲಯನ್ಸ್‌ ಶಾಲೆಯ  ಮುಖ್ಯಶಿಕ್ಷಕ ಕೆ. ಚಂದ್ರಶೇಖರ್‌, ಬೀರಲಿಂಗೇಶ್ವರ ಶಾಲೆಯ ಡಿ.ಕೆ. ಕರಿಬಸಪ್ಪ, ಆಶ್ರಯ ಕಾಲೋನಿ ಶಾಲೆಯ ಹೆಚ್‌. ಶಶಿಕುಮಾರ್‌, ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀಮತಿ ರೋಜಾ, ಸದಸ್ಯರಾದ ಗೌರಮ್ಮ, ಮಮತಾ, ಜ್ಯೋತಿ, ಮುಖ್ಯ ಶಿಕ್ಷಕ ಎ.ಕೆ. ಕುಮಾರ್‌ ಸೇರಿದಂತೆ ಇನ್ನೂ ಅನೇಕ ಶಿಕ್ಷಕರು ಭಾಗವಹಿಸಿದ್ದರು.

ಶಿಕ್ಷಕಿ ಸುನೀತಾ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾಕುಮಾರಿ ನಿರೂಪಿಸಿದರೆ, ಕೊನೆಯಲ್ಲಿ ತಾ. ಸರ್ಕಾರಿ ನೌಕರರ ಸಂಘದ ನಿರ್ದೇಶಕ ಬಿ.ಹೆಚ್‌. ಶಿವಕುಮಾರ್ ವಂದಿಸಿದರು.

error: Content is protected !!