ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ
ಹರಿಹರ, ಅ,4- ಇಂದಿನ ಭಾರತಕ್ಕೆ ಮತ್ತು ಜಗತ್ತಿಗೆ ಗಾಂಧೀಜಿಯ ಬದುಕು ಮತ್ತು ಚಿಂತನೆಗಳು ಅತ್ಯಂತ ಪ್ರಸ್ತುತ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಅಭಿಪ್ರಾಯಪಟ್ಟರು.
ನಗರದ ಶ್ರೀ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪನವರ ಮಗ ವಿನಯ್ ಕುಮಾರ್ ಹುಟ್ಟುಹಬ್ಬದ ನಿಮಿತ್ಯ ವೃದ್ಧರಿಗೆ ಊಟದ ವ್ಯವಸ್ಥೆ ಹಾಗೂ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಬಹಳಷ್ಟು ಜನರಿಗೆ ಸಮಾಜ ಮುಖಿ ಚಿಂತನೆ ಇದ್ದಾಗ ಮಾತ್ರ, ಜಗತ್ತು ಉಳಿಯಲು ಸಾಧ್ಯ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹವರು ಇಂತಹ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿ ಹಾಗೂ ಶಾಸ್ತ್ರೀಯವರು ವ್ಯಕ್ತಿಗಳಲ್ಲ ಅವರು ಭಾರತದ ಶಕ್ತಿ ಎಂದು ಅವರು ಪ್ರತಿಪಾದಿಸಿದರು.
ಹಿರಿಯ ಸಾಹಿತಿ, ನಿವೃತ್ತ ಪ್ರೊ. ಸಿ.ವಿ. ಪಾಟೀಲ್ ಮಾತನಾಡಿ, ಪ್ರಾಮಾಣಿಕವಾಗಿರು, ಉದಾತ್ತವಾಗಿರು, ತ್ಯಾಗ ಮತ್ತು ಸೇವೆಯನ್ನು ನಿರಂತರವಾಗಿ ಮಾಡುತ್ತಿರುವೆ ಎಂದು ಗಾಂಧೀಜಿಯವರು ಕರಕೊಟ್ಟದ್ದನ್ನು ಜನರು ಇಂದಿಗೂ ಸ್ಮರಿಸುತ್ತಾರೆ.
ಸರಳತನದ ಆಚರಣೆ ಅಷ್ಟೊಂದು ಸುಲ ಭದ್ದಲ್ಲ. ರಾಜಕೀಯ, ಧಾರ್ಮಿಕ, ಅಧ್ಯಾತ್ಮ ಎಲ್ಲದರಲ್ಲೂ ಸರಳತೆಯನ್ನು ರೂಢಿಸಿಕೊಂಡ ವಿಶ್ವನಾಯಕ ಹಾಗೂ ವಿಶ್ವದ ಆರಾಧಕರು ಗಾಂಧೀಜಿ ಮತ್ತು ಶಾಸ್ತ್ರೀಜಿ ಎಂದು ಬಣ್ಣಿಸಿದರು.
ತಪೋವನ ಛೇರ್ಮನ್ ಡಾ. ಶಶಿ ಕುಮಾರ್ ಮಾತನಾಡಿ, ಮಹಾತ್ಮ ಗಾಂಧೀಜಿ ಯವರ ಶಾಂತಿ ಮಂತ್ರವನ್ನು ಎಲ್ಲರೂ ಮೈಗೂಡಿಸಿಕೊಂಡು ಹೋದಾಗ ಮನುಷ್ಯರ ಬೆಳವಣಿಗೆ ತನ್ನಿಂದ ತಾನೇ ಹೆಚ್ಚುತಾ ಹೋಗುತ್ತದೆ. ಗಾಂಧೀಜಿಯವರು ಪ್ರಕೃತಿ ಚಿಕಿತ್ಸೆ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಅವರ ಆಹಾರ ಪದ್ಧತಿಯನ್ನು ಪ್ರಕೃತಿ ವೈದ್ಯರು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಎಲ್ಲರೂ ಪ್ರಕೃತಿ ಚಿಕಿತ್ಸೆ ಪಡೆಯುವಂತೆ ಮತ್ತು ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಎಸ್.ಹೆಚ್. ಹೂಗಾರ್, ಸಿ.ಎನ್. ಹುಲಿಗೇಶ್, ಬಿ.ರೇವಣಸಿದ್ದಪ್ಪ, ಜೆ. ಕಲೀಮ್ ಬಾಷಾ, ರಾಜಶೇಖರ್ ಕೆ.ಬಿ., ಹೆಚ್.ಸುಧಾಕರ್, ವೈ. ಕೃಷ್ಣಮೂರ್ತಿ, ಶಶಿಕುಮಾರ್ ಮೆಹರ್ವಾಡೆ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಪ್ಪ, ಪತ್ರಕರ್ತ ಪಂಚಾಕ್ಷರಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಚಂದ್ರಮ್ಮ ಕೊಟ್ರಪ್ಪ ವಹಿಸಿದ್ದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ನಗರಸಭೆ ಸದಸ್ಯ ಹನುಮಂತಪ್ಪ, ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಹೆಚ್. ಹೂಗಾರ್, ಜೆ. ಕಲೀಂ ಭಾಷಾ, ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ, ಮಾಜಿ ದೂಡಾ ಸದಸ್ಯ ಹೆಚ್. ನಿಜಗುಣ, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಬಿ. ರಾಜಶೇಖರ, ಸಿ.ಎನ್. ಹುಲಗೇಶ್, ಬಸಣ್ಣ ಚಿಕ್ಕಬಿದರಿ, ಕೆ.ಎನ್. ಹಳ್ಳಿ ಚಂದ್ರಶೇಖರ್, ವೈ. ಕೃಷ್ಣಮೂರ್ತಿ, ಪ್ರಕಾಶ್ ಕೋಳೂರು, ಸುಬ್ರಹ್ಮಣ್ಯ ನಾಡಿಗೇರ್, ಕೆ. ಪಂಚಾಕ್ಷರಿ, ಕಸಾಪ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಬಿ.ಬಿ. ರೇವಣನಾಯ್ಕ್, ಸದಸ್ಯ ಎ. ರಿಯಾಜ್ ಅಹ್ಮದ್, ಹೆಚ್.ಎಸ್. ಕೊಟ್ರೇಶ್, ವಿ.ಬಿ. ಕೊಟ್ರೇಶ್, ಶೇಖರಗೌಡ ಪಾಟೀಲ್, ಹೆಚ್.ಸಿ. ಕೀರ್ತಿಕುಮಾರ್, ಹೆಚ್. ಸುಧಾಕರ್, ಎನ್.ಇ. ಸುರೇಶ್, ನಾಗರಾಜ್, ಇಲಿಯಾಸ್ ಅಹ್ಮದ್, ಶ್ರೀನಿವಾಸ್ ಕೊಡ್ಲಿ, ಗಂಗಾಧರ ಕೊಟಗಿ, ವೀರಣ್ಣ ಅಂಗಡಿ, ಪ್ರಭು ಕೊಟಗಿ ಇತರರು ಹಾಜರಿದ್ದರು.
ಹೆಚ್.ಕೆ. ಕೊಟ್ರಪ್ಪ ಸ್ವಾಗತಿಸಿದರು. ಕು. ರೇಖಾ ಪ್ರಾರ್ಥಿಸಿದರು, ಬಿ.ಬಿ. ರೇವಣನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರೆ, ವಿ.ಬಿ. ಕೊಟ್ರೇಶಪ್ಪ ವಂದಿಸಿದರು.