ನಗರದಲ್ಲಿಂದು ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭ

ನಗರದಲ್ಲಿಂದು ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭವನ್ನು   ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಇಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ಮಾಜಿ ಸಚಿವ ಸಿ.ಟಿ. ರವಿ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಶಾಸಕ ಬಿ.ಪಿ. ಹರೀಶ್, ಹಿಂದೂ ಸಂಘಟನಾ ಪ್ರಮುಖ ಕೆ.ಬಿ. ಶಂಕರನಾರಾಯಣ್ ಆಗಮಿಸಲಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಲುವಾಗಿ ಜಾಗೃತಿ ಮೂಡಿಸಲು ಶ್ರೀರಾಮ ಜ್ಯೋತಿ ರಥಯಾತ್ರೆ 1990ರ ಅಕ್ಟೋಬರ್ 6ರಂದು ದಾವಣಗೆರೆಗೆ ಆಗಮಿಸಿತ್ತು. ರಥಯಾತ್ರೆ ಸ್ವಾಗತಿಸುವ ಸಂದರ್ಭದಲ್ಲಿ ನಡೆದ ಕೋಮುಗಲಭೆಯಲ್ಲಿ 8 ಜನ ಹಿಂದೂ ಕಟ್ಟಾಳುಗಳು ಹುತಾತ್ಮರಾಗಿದ್ದರು. 

ಅವರ ಸ್ಮರಣಾರ್ಥ 15 ಕೆ.ಜಿ. ಬೆಳ್ಳಿ ಇಟ್ಟಿಗೆ ಸಮ ರ್ಪಿಸಲಾಗುತ್ತಿದೆ. ಕೋಮುಗಲಭೆಯಲ್ಲಿ ಹುತಾ ತ್ಮರಾದ  8 ಜನರ ಹೆಸರುಗಳನ್ನು ಬೆಳ್ಳಿ ಇಟ್ಟಿಗೆ ಮೇಲೆ ಬರೆಸಲಾಗಿದೆ ಎಂದು ಹೇಳಿದರು. 

ಹುತಾತ್ಮ ರಾದವರ ಹಾಗೂ ಗಾಯಗೊಂಡವರ ಕುಟುಂ ಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಗೌರವ ಸಮರ್ಪಣೆ ಮಾಡಲಾಗುವುದು.

ಕಳೆದ ಹತ್ತು ವರ್ಷಗಳಿಂದ ಕೋಮುಗಲಭೆ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಉಚಿತವಾಗಿ ವಕಾಲತ್ತು ವಹಿಸಿ, ನಮಗೆ ನ್ಯಾಯ ದೊರಕಿಸಿಕೊಟ್ಟ ನಾಲ್ವರು ವಕೀಲರನ್ನೂ ಸಹ ಇದೇ ವೇಳೆ ಸನ್ಮಾನಿಸಲಾಗುವುದು.

error: Content is protected !!