ಬಿಐಇಟಿಯಲ್ಲಿ ನಾಳೆ ವಿಶ್ವ ಅಂತರಿಕ್ಷ ಸಪ್ತಾಹ

9 ವಿಭಾಗಗಳಿಗೂ ಎನ್‌ಬಿಎ ಮಾನ್ಯತೆ: ಅರವಿಂದ್

2023-24ನೇ ಸಾಲಿ ನಲ್ಲಿ ಬಿಐಇಟಿ ಕಾಲೇಜಿ ನಲ್ಲಿ 1005 ವಿದ್ಯಾರ್ಥಿ ಗಳು ಬಿಇ ಅಧ್ಯಯನಕ್ಕೆ ದಾಖ ಲಾಗಿದ್ದು, ಕಾಲೇಜಿನ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿದೆ ಎಂದು ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್ ಹೇಳಿದರು.

ಪ್ರಸ್ತುತ ವರ್ಷ ನವದೆಹಲಿಯ ರಾಷ್ಟ್ರೀಯ ಮಾನ್ಯತಾ ಮಂಡಳಿ (NBA) ನಾಲ್ಕು ವಿಭಾಗಗಳನ್ನು ಮಾನ್ಯತೆ ಮಾಡಿದ್ದು, ಇದರೊಂದಿಗೆ ಕಾಲೇಜಿನ 9 ವಿಭಾಗಗಳಿಗೂ ಮಾನ್ಯತೆ ದೊರೆತಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದಾವಣಗೆರೆ, ಅ.5- ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಾಹಾವಿದ್ಯಾಲಯ ಹಾಗೂ ಇಸ್ರೋದ ಅಂಗ ಸಂಸ್ಥೆ ಯು.ಆರ್.ರಾವ್ ಸೆಟಲೈಟ್ ಸೆಂಟರ್ ಸಹಭಾಗಿತ್ವದಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ವನ್ನು  ನಾಡಿದ್ದು ದಿನಾಂಕ 7ರಿಂದ ನಗರದ ಬಿಐಇಟಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಐಇಟಿ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ತಿಳಿಸಿದ್ದಾರೆ.

ಗುರುವಾರ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ  ಅವರು, ವಿದ್ಯಾರ್ಥಿಗಳು ಹಾಗೂ ಸಾರ್ವ ಜನಿಕರಲ್ಲಿ ಬಾಹ್ಯಾಕಾಶದ ಕುರಿತು ಅರಿವು ಮೂಡಿಸಲು ಈ ಸಪ್ತಾಹ ಆಚರಿಸಲಾಗುತ್ತಿದೆ. `ಆಕಾಶ ಹಾಗೂ ವ್ಯವಹಾರ’ ಈ ವರ್ಷದ ಸಪ್ತಾಹದ ಥೀಮ್ ಆಗಿದೆ ಎಂದು ಹೇಳಿದರು.

ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 7ರಂದು ಬೆಳಿಗ್ಗೆ 9.15 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ರಾಮನಗೌಡ ವೆಂಕನಗೌಡ ನಾಡಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ.ರಾಘವೇಂದ್ರ ಬಿ. ಕುಲಕರ್ಣಿ, ಡಿಡಿಪಿಐ ಬಿ.ಕೊಟ್ರೇಶ್, ಬಿಐಇಟಿ ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್ ಉಪಸ್ಥಿತರಿರಲಿದ್ದಾರೆ.

ಸಮಾರಂಭದ ಅಂಗವಾಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಆಶುಭಾಷಣ ಸ್ಪರ್ಧೆ ಹಾಗೂ ಸ್ಮರಣ ಶಕ್ತಿ ಪರೀಕ್ಷಾ ಸ್ಪರ್ಧೆಗಳನ್ನು ಇಸ್ರೋದ ಯು.ಆರ್.ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿಗಳು ಆಯೋಜಿಸಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

ಮಕ್ಕಳಲ್ಲಿ ಅಂತರಿಕ್ಷ ವಿಜ್ಞಾನ ಮತ್ತು ದೇಶೀ ತಂತ್ರಜ್ಞಾನಗಳ ಮೇಲಿನ ಆಸಕ್ತಿ ಹೆಚ್ಚಿಸಲು ಇಸ್ರೋದ ಕೃತಕ ಉಪಗ್ರಹಗಳು, ಉಡಾವಣೆ ಯಂತ್ರಗಳು ಹಾಗೂ ಬಾಹ್ಯಾಕಾಶ ಉಪಕರಣಗಳ ವಸ್ತು ಪ್ರದರ್ಶನವನ್ನೂ ಆಯೋಜಿಸಲಾಗಿದೆ.  ಕಾರ್ಯಕ್ರಮ ವೀಕ್ಷಿಸಲು ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬೇಕಿದೆ, ಮಾಹಿತಿಗಾಗಿ ಡಾ.ಸಂತೋಷ್ ಕುಮಾರ್  (8073286089) ಗೆ ಅವರನ್ನು ಸಂಪರ್ಕಿಸಬಹುದು.

ಪ್ರವೀಣ್ ಕುಮಾರ್, ಸಿಎಂ. ಕಲ್ಲೇಶಪ್ಪ, ಜಿ.ಪಿ. ದೇಸಾಯಿ, ಶ್ರೀನಿಧಿ ಕುಲಕರ್ಣಿ, ಸಂತೋಷ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!