ಮಲೇಬೆ ನ್ನೂರು, ಅ. 4 – ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಮುಖ್ಯ ಚುನಾವ ಣಾಧಿಕಾರಿಗಳ ನಿರ್ದೇಶನ ದಂತೆ ಉಪ ತಹಶೀಲ್ದಾರ್ ಆರ್. ರವಿ ಅವರು ಭಾನುವಾರ ಕುಂಬಳೂರು, ಮಲೇಬೆನ್ನೂರು, ಕೊಮಾರನಹಳ್ಳಿ ಮತ್ತು ಹಿಂಡಸಘಟ್ಟ ಗ್ರಾಮಗಳಿಗೆ ತರಳಿ, ಹಿರಿಯ ನಾಗರಿಕರನ್ನು ಸನ್ಮಾನಿಸಿ, ಗೌರವಿಸಿದರು. ಕುಂಬಳೂರಿನಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಾಗೋಳ್ ಕಲ್ಮೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಹೆಚ್. ಬಸವರಾಜ್, ಮಲೇಬೆನ್ನೂರಿನಲ್ಲಿ ಪುರಸಭೆ ಸದಸ್ಯ ಬಿ. ಮಂಜುನಾಥ್, ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಮುಖಂಡರಾದ ಮುದೇಗೌಡ್ರು ತಿಪ್ಪೇಶ್, ಓ.ಜಿ. ಕುಮಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ಕೊಟ್ರೇಶ್, ಆನಂದ ತೀರ್ಥ, ಗ್ರಾಮ ಸಹಾಯಕರಾದ ಮಾರುತಿ, ಶಶಿ ಹಾಗೂ ನಾಡ ಕಛೇರಿಯ ಕಂಪ್ಯೂಟರ್ ಆಪರೇಟರ್ ಬಸವರಾಜ್ ಮತ್ತಿತರರು ಹಾಜರಿದ್ದರು.
January 9, 2025