ಮಲೇಬೆನ್ನೂರು, ಅ. 4 – ಪಟ್ಟಣದಲ್ಲಿ ಮುಷ್ಯಗಳ ಕಾಟ ಹೆಚ್ಚಾಗಿದ್ದು, ಜನ ಭಯದಿಂದ ಓಡಾಡುವಂತಾಗಿದೆ. ಶಾಲೆಗೆ ತೆರಳುತ್ತಿರುವ ಮಕ್ಕಳ ಮೇಲೆ ದಾಳಿ ನಡೆಸಿದ್ದು, ಮಹಿಳೆಯರು, ವೃದ್ದರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 4ನೇ ಮತ್ತು 5ನೇ ವಾರ್ಡ್ಗಳಲ್ಲೂ ಮುಷ್ಯಗಳ ಕಾಟ ಹೆಚ್ಚಾಗಿದ್ದು, ಜಯ್ಯಪ್ಪ ಮತ್ತು ವಿಜಯಕುಮಾರ್ ಇವರ ಮೇಲೆ ದಾಳಿ ಮಾಡಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್ ತಿಳಿಸಿದ್ದಾರೆ. ಮುಷ್ಯಗಳ ಕಾಟ ತಪ್ಪಿಸುವಂತೆ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಇವರಿಗೆ ಮನವಿ ಮಾಡಿದ್ದಾರೆ. ಪಟ್ಟಣದ ಕಲ್ಲೇಶ್ವರ ಬಡಾವಣೆ ಸರ್ಕಾರಿ ಶಾಲೆಯ ಬಳಿ ಮುಷ್ಯಗಳನ್ನು ಹಿಡಿದು ಹಾಕಲು ಬೋನುಗಳ ವ್ಯವಸ್ಥೆ ಮಾಡಲಾಗಿದೆ. ಬರಿ ಬೋನುಗಳ ವ್ಯವಸ್ಥೆ ಮಾಡಿದರೆ ಸಾಲದು, ಕಾರ್ಯಾಚರಣೆ ಮೂಲಕ ಮುಷ್ಯಗಳನ್ನು ಹಿಡಿದು ಕಾಡಿಗೆ ಬಿಡಬೇಕೆಂದು ಮುದೇಗೌಡ್ರ ತಿಪ್ಪೇಶ್ ಒತ್ತಾಯಿಸಿದ್ದಾರೆ.
January 9, 2025