ಜಿಲ್ಲಾ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಎಸ್ಸೆಸ್ ಸ್ಮರಣೆ
ದಾವಣಗೆರೆ, ಅ. 3 – ಚಾರಿತ್ರ್ಯವಿಲ್ಲದ ಶಿಕ್ಷಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ತತ್ವರಹಿತ ರಾಜಕಾರಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಇಂತಹ ಅನೇಕ ನಾಣ್ಣುಡಿಗಳನ್ನು ಹೇಳಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಮತ್ತು ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿರುವ ಮಹಾತ್ಮ ಗಾಂಧೀಜಿ ವಿಶ್ವಕ್ಕೆ ಆದರ್ಶಪ್ರಾಯರು. ಇಂದು ಮಹಾತ್ಮ ಗಾಂಧೀಜಿಯ 154ನೇ ಜನ್ಮ ದಿನಾಚರಣೆ ಜೊತೆಗೆ ಈ ದೇಶದ 2ನೇ ಪ್ರಧಾನಿ ಹಾಗೂ ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮದಿನವನ್ನು ದೇಶದೆಲ್ಲೆಡೆ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗದಲ್ಲಿ ಹೋರಾಡಿದವರು ಈ ದೇಶಕ್ಕೆ ನೀಡಿದ ಕೊಡುಗೆ, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಾಹಿತ್ಯ ಕೊಡುಗೆ, ತತ್ವಗಳು, ಸಿದ್ಧಾಂತಗ ಳಿಂದಾಗಿ ಸದಾ ದೇಶದ ಎಲ್ಲ ಪ್ರಜೆಗಳಿಂದ ಸ್ಮರಿಸಲ್ಪಡುತ್ತಿದ್ದಾರೆ. ಇಂದು ಅವರ ಮಹತ್ವ, ಅವರ ಇತಿಹಾಸ, ಅವರನ್ನು ವಿಶೇಷವಾಗಿ ನೆನೆಯುವುದೇ ನಮ್ಮ ಕರ್ತವ್ಯ ಎಂದರು.
ಅನೇಕರ ಬರಹಗಳಿಂದ ಸ್ಫೂರ್ತಿ ಪಡೆದಿದ್ದ ಅವರುಗಳ ಜ್ಞಾನ , ಸತ್ಯ, ಪ್ರಾಮಾ ಣಿಕತೆ, ಒಳ್ಳೆಯ ಗುಣಗಳನ್ನು ನಮ್ಮಲ್ಲಿ ಅಳವ ಡಿಸಿಕೊಂಡಾಗ ಅವರ ಆಸೆ ಈಡೇರಿಸುವಂತಾಗಲಿದೆ. ನಾವು ಅವರುಗಳ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ ಉತ್ತಮ ಪ್ರಜೆಗಳಾಗಿ, ಉತ್ತಮ ಮನುಷ್ಯ ರಾಗಿ, ಜೀವನದಲ್ಲಿ ಏಳಿಗೆಯನ್ನು ಖಂಡಿತ ಸುಲಭ ವಾಗಿ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಈಶ್ವರ್ ಮಹಿಳಾ ಘಟಕದ ಮಂಜಮ್ಮ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯ ಎ. ನಾಗರಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಎಮ್.ಹೆಚ್. ಸಾಗರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಸೇವಾದಳದ ಡೋಲಿ ಚಂದ್ರು, ಜಿಲ್ಲಾಧ್ಯಕ್ಷ ಕವಿತಾ ಚಂದ್ರಶೇಖರ್, ಗೀತಾ ಪ್ರಶಾಂತ್, ಗೀತಾ ಚಂದ್ರಶೇಖರ್, ದ್ರಾಕ್ಷಾಯಣಮ್ಮ, ರಾಜೇ ಶ್ವರಿ, ರಾಧಾಬಾಯಿ, ಶುಭಮಂಗಳ, ಜಯ ಮ್ಮ, ವಿನಾಯಕ ಭೋವಿ, ಮೈನುದ್ದೀನ್, ಸದ್ದಾಂ, ರಾಕೇಶ್, ಜೊಳ್ಳಿ ಬಸವರಾಜ್, ರಘು, ರವಿ, ಯುವರಾಜ್ ಮತ್ತಿತರರಿದ್ದರು.