ಆಂಜನೇಯ ಬಡಾವಣೆಯಲ್ಲಿ ಇಂದು ಮಹಿಳಾ ಆರೋಗ್ಯ ಶಿಬಿರ

ಆಂಜನೇಯ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಎಸ್‌.ಎಸ್‌. ಹೆಲ್ತ್‌ ಕೇರ್‌ ಸಹಯೋಗದಲ್ಲಿ ಇಂದು ಮಹಿಳಾ ಆರೋಗ್ಯ ತಪಾಸಣೆ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರ ದಲ್ಲಿ ಸ್ತನ ಮತ್ತು ಗರ್ಭಕೋಶದ ಉಚಿತ ತಪಾಸಣೆ ನಡೆಯಲಿದೆ.  

ಬೆಳಿಗ್ಗೆ 9 ಗಂಟೆಯಿಂದ ಆಂಜನೇಯ ಬಡಾವಣೆಯ 13ನೇ ಕ್ರಾಸ್‌ನಲ್ಲಿರುವ ಯೋಗ ಹಾಲ್‌ ಮತ್ತು ಲೈಬ್ರರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದು.  ಮಧ್ಯಾಹ್ನ 12.30 ಕ್ಕೆ `ಆರೋಗ್ಯ ಜಾಗೃತಿ’ ವೇದಿಕೆ ಕಾರ್ಯಕ್ರಮವಿರುವುದು. ಎಸ್‌.ಎಸ್‌. ಕೇರ್‌ ಟ್ರಸ್ಟ್‌ನ ಆರೋಗ್ಯ ಸೇವೆಗಳನ್ನು ಮಹಿಳೆಯರು ಉಚಿತವಾಗಿ ಪಡೆಯಬಹುದಾಗಿದೆ. ನಮ್ಮ  ನಡೆ ಆರೋಗ್ಯದ ಕಡೆ ಆಗಲಿ ಎಂದು ಸಮಿತಿ ಅಧ್ಯಕ್ಷರಾದ ಕುಸುಮ ಲೋಕೇಶ್‌ ತಿಳಿಸಿದ್ದಾರೆ. ವಿವರಗಳಿಗೆ ಕುಸುಮ ಲೋಕೇಶ್‌  (702 20 02518), ವಸಂತ ಕೆ.ಆರ್‌.  (8660262270) ಅವರುಗಳನ್ನು ಸಂಪರ್ಕಿಸಬಹುದು.

error: Content is protected !!