ರಾಣೇಬೆನ್ನೂರು,ಅ.2- ಇಲ್ಲಿನ ಓಂ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ `ದಾಂಡಿಯಾ ನೈಟ್’ ಸಾಂಸ್ಕೃತಿಕ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುವುದು ಎಂದು ಶಾಲೆಯ ಸಂಸ್ಥಾಪಕಿ ರುಕ್ಮಿಣಿ ಸಾವುಕಾರ ತಿಳಿಸಿದರು.
ಇದೇ ದಿನಾಂಕ 17 ರಂದು ದಾಂಡಿಯಾ ನೈಟ್, 15 ಮತ್ತು 16 ಮೂರು ದಿನ ಇತರೆ ರಸಮಂಜರಿ ಜೊತೆಗೆ ಕಲಾಸಂತೆ, ವಿವಿಧ ಕಲಾತ್ಮಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಕಲಾಸಕ್ತರು ಆಗಮಿಸಿ ನಾಡಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ರುಕ್ಮಿಣಿ ಅವರು ಮನವಿ ಮಾಡಿದ್ದಾರೆ.