`ಇಂದು ಶೇಕಡಾ ಏಳು, ಮುಂದೆ ಶೇಕಡಾ ಎಪ್ಪತ್ತು’

`ಇಂದು ಶೇಕಡಾ ಏಳು, ಮುಂದೆ ಶೇಕಡಾ ಎಪ್ಪತ್ತು’

ನವಯುಗದ ಸಂತೋಷ ಪಾಟೀಲ್‌ ಆಶಯ

ರಾಣೇಬೆನ್ನೂರು,ಅ.2-  ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಜೆಡಿ ಎಸ್, ಆಮ್ ಆದ್ಮಿ, ಎನ್‌ಸಿಪಿ ಯಂತಹ  ಪಕ್ಷಗಳ ವಿರುದ್ದ ಸೆಣಸಿದ ಸ್ಥಳೀಯ ನವಯುಗ ಸಂಘಟನೆಗೆ ಶೇಕಡಾ 7 ರಷ್ಟು ಮತಗಳು ಬಂದಿವೆ. `ಇಂದು ಶೇಕಡಾ ಏಳು, ಮುಂದೆ ಶೇಕಡಾ ಎಪ್ಪತ್ತು’ ಆಗಬ ಹುದು ಎಂದು ನವಯುಗದ ನಿರ್ಮಾತೃ ಸಂತೋಷ ಪಾಟೀಲ ಹೇಳಿದರು.

ಅವರಿಂದು ತಮ್ಮ ಕಛೇರಿಯಲ್ಲಿ ಮಹಾತ್ಮ ಗಾಂಧಿ ಹಾಗೂ  ಲಾಲ್ ಬಹಾದ್ದೂರ್‌ ಶಾಸ್ತ್ರಿ ಅವರ ಜನ್ಮ ದಿನ  ಆಚರಿಸಿ ವಿಧಾನಸಭೆ ಹಾಗೂ ನಿನ್ನೆ ನಡೆದ ಕೆಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಉಲ್ಲೇಖಿಸಿ ಮಾತನಾಡುತ್ತಿದ್ದರು.

ಜನಸಂಘ ನಂತರದ ಬಿಜೆಪಿ ರಾಜ್ಯದಲ್ಲಿ ಶೇಕಡಾ ಹತ್ತಕ್ಕೂ ಕಡಿಮೆ ಮತ ಪಡೆಯುತ್ತಿದ್ದ ಕಾಲವಿತ್ತು. ನಂತರದಲ್ಲಿ ಕೇಂದ್ರದಲ್ಲಿ, ರಾಜ್ಯದಲ್ಲಿ ಆಡಳಿತ ನಡೆಸುವ  ಅವಕಾಶ ಒದಗಿಬಂತು. ಅವಕಾಶದ ಕಾಯುವಿಕೆ ನಮ್ಮದು. ಮುಂದೆ ಬರಲಿರುವ ಎಲ್ಲ ಚುನಾವಣೆಗಳಲ್ಲಿ ಸಂಘ ಟನೆಯ ಅಭ್ಯರ್ಥಿಗಳ ಸ್ಪರ್ಧೆ ಇರಲಿದೆ ಎಂದು ಸಂತೋಷ ಪಾಟೀಲ ಹೇಳಿದರು.

ನಿಸ್ವಾರ್ಥ ಸೇವೆ, ಸತ್ಯ, ಅಹಿಂಸೆಯ ಬದುಕಿನ ಮಹಾತ್ಮಾಗಾಂಧಿ,  ಸರಳ ಜೀವ ನದ ಮೃದು ಹೃದಯಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರುಗಳು ದೇಶಕ್ಕಾಗಿ ಬದುಕಿ ದವರು. ಅವರ ಜನ್ಮ ದಿನ ಆಚರಿಸುವು ದರೊಂದಿಗೆ ಅವರನ್ನು ಮಾದರಿಯಾಗಿಟ್ಟು ಕೊಳ್ಳುವುದು ನವಯುಗದ ಸಿದ್ದಾಂತ ಎಂದು ಸಂತೋಷ ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಕಾಶ ದೇಸಾಯಿ, ಹನುಮಂತರಾಜು, ಸಂಘ ಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

error: Content is protected !!