ರಾಣೇಬೆನ್ನೂರು, ಅ.2- ಮಾಜಿ ಶಾಸಕ ಅರು ಣಕುಮಾರ ಪೂಜಾರ ನೇತೃತ್ವದ ಹಿಂದೂ ವಿರಾಟ ಮಹಾಗಣಪತಿ ವಿಸರ್ಜನೆ ಇಂದು ನಡೆಯಿತು.
ಹುಡುಗರಿಗೆ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಇದ್ದ ಡಿಜೆಗಳ ಎದುರು ಎರಡೂ ಯುವ ಶಕ್ತಿಗಳು ಅತ್ಯಂತ ಹುರುಪು ಹುಮ್ಮಸ್ಸಿನಿಂದ ತಾಳಕ್ಕೆ ತಕ್ಕ ಹೆಜ್ಜೆ ಕುಣಿತದೊಂದಿಗೆ ಸಂಭ್ರಮಿಸುತ್ತಿದ್ದರು. ಸಮ್ಮಾಳ ಸೇರಿದಂತೆ ಜಾನಪದ ಕಲಾತಂಡಗಳು, ಹಾಸ್ಯಪ್ರದರ್ಶನಗಳ ಗೊಂಬೆ ಕುಣಿತ, ಮೆರವಣಿಗೆಗೆ ರಂಗು ತಂದಿದ್ದವು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಸಿಗದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಹದ್ದಿನ ಕಣ್ಗಾವಲು ಮೆರವಣಿಗೆಯನ್ನು ಸುಖಾಂತ್ಯಗೊಳಿಸಿತು. ಮಾಜಿ ಶಾಸಕ ಅರುಣಕುಮಾರ್ ಸೇರಿದಂತೆ, ಅವರ ಬೆಂಗಾವಲು ಪಡೆ ಅತ್ಯಂತ ಜವಾಬ್ದಾರಿಯಿಂದ ಮೆರವಣಿಗೆ ಉಸ್ತುವಾರಿ ವಹಿಸಿತ್ತು.