ದಾವಣಗೆರೆ, ಅ. 2- ರೋಟರಿ ದೇವನಗರಿ ವಲಯದ ನೇತೃತ್ವದಲ್ಲಿ ನಗರದ ಎಲ್ಲಾ ರೋಟರಿ ಮತ್ತು ಇನ್ನರ್ ವ್ಹೀಲ್ ಕ್ಲಬ್‌ಗಳ ಸಕ್ರಿಯ ಸಹಕಾರದೊಂದಿಗೆ ಗಾಂಧಿ ಜಯಂತಿಯಂದು ಸ್ವಚ್ಚ ಭಾರತ್ ಕುರಿತು ಜಾಗೃತಿ ನಡಿಗೆಯನ್ನು ಇಂದು ಹಮ್ಮಿಕೊಳ್ಳಲಾಗಿತು.
ಎಂ.ಸಿ. ಮೋದಿ ವೃತ್ತದಿಂದ ವಿದ್ಯಾನಗರದ ಮೊದಲ ಬಸ್ ಸ್ಟ್ಯಾಂಡ್ ಬಳಿ ಇರುವ ಮಹಾತ್ಮಾ ಗಾಂಧಿ ಪ್ರತಿಮೆಯ ತನಕ ನಡೆದ ಈ ಅಭಿಯಾ ನವು ನಮ್ಮ ದಾವಣಗೆರೆ ಫೌಂಡೇಶನ್, ಜ್ಯೋತಿ ಗ್ಯಾಸ್ ಏಜೆನ್ಸಿ ಮತ್ತು ಮದ್ರಾಸ್ ಫರ್ಟಿಲೈಸರ್ ನಿಂದ ಗಮನಾರ್ಹ ಬೆಂಬಲ ಪಡೆಯಿತು.
ಅಭಿಯಾನದಲ್ಲಿ ಎಜು-ಏಷಿಯಾ ಎಂ. ಎನ್.ಎಸ್ ಕಾನ್ವೆಂಟ್ ಮತ್ತು ದೆಹಲಿ ಪಬ್ಲಿಕ್ ಸ್ಕೂಲ್‌ನ ಸುಮಾರು ನಾಲ್ಕು ನೂರು ಶಾಲಾ ಮಕ್ಕ ಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ವಚ್ಛತೆ ಪ್ರಚಾರದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ನಡಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಮುಖ್ಯ ಅತಿಥಿಯಾಗಿ ಮಹಾ ನಗರ ಪಾಲಿಕೆಯ ಸದಸ್ಯ ಕೆ. ಪ್ರಸನ್ನ ಕುಮಾರ್ ಅವರು ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು ಮತ್ತು ಸ್ವಚ್ಛತೆಗೆ ತಮ್ಮ ಬದ್ಧತೆಯನ್ನು ಪ್ರತಿಜ್ಞೆ ಮಾಡಲು ಹಾಜರಿದ್ದ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು.
ಅಭಿಯಾನದ ನೇತೃತ್ವ ವಹಿಸಿದ್ದ ರೋಟರಿ ಕ್ಲಬ್‌ನ ಸಹಾಯಕ ರಾಜ್ಯಪಾಲ ಅಂದನೂರು ಆನಂದಕುಮಾರ್ ಅವರೊಂದಿಗೆ ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷರಾದ ಕುಸುಮಾ ವಿಜಯಾನಂದ್, ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಕಲ್ಲಪ್ಪ, ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷ ಪುಟ್ಟೇಶಿ, ರೋಟರಿ ಮಿಡ್ ಟೌನ್ ನ ಅಧ್ಯಕ್ಷರಾದ ಡಾ. ಜಯಸಿಂಹ, ಇನ್ನರ್ ವ್ಹೀಲ್ ನ ಅಧ್ಯಕ್ಷರಾದ ಶ್ರೀಮತಿ ಆಶಾ ಜಗದೀಶ್ ಬೇತೂರು ಮತ್ತು ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆರ್.ಎಸ್. ನಾರಾಯಣ ಸ್ವಾಮಿ ಸೇರಿದಂತೆ, ಹಿರಿಯ ರೊಟೇರಿಯನ್‌ಗಳು ದಾವಣಗೆರೆ ಮಹಾನಗರ ಪಾಲಿಕೆಯ ನಗರ ಸ್ವಚ್ಛತಾ ವಿಭಾಗದ ಹನ್ನೆರಡು ಪೌರ ಕಾರ್ಮಿಕರನ್ನು ಸನ್ಮಾನಿಸಿದರು.
ಅಭಿಯಾನವನ್ನು ಆರ್.ಟಿ. ಮೃತ್ಯುಂಜಯ, ಎಂ.ಜಿ. ಶ್ರೀಕಾಂತ್, ಆರ್.ಎಸ್. ರಾಜೇಂದ್ರಕುಮಾರ್ ಅವರು ಇತರೆ ರೋಟರಿ ಕ್ಲಬ್‌ನ ಸದಸ್ಯರ ಬೆಂಬಲದೊಂದಿಗೆ ಸಮರ್ಥವಾಗಿ ನಿರ್ವಹಿಸಿದರು.
ಪಿ.ಬಿ. ಪ್ರಕಾಶ್, ಜಗದೀಶ್ ಬೇತೂರು, ವಿಕಾಸ್ ಸಾಂಘವಿ, ವಿಶ್ವನಾಥ್ ರೇವಡಿ, ಸಿದ್ದಪ್ಪ ಬಿಲ್ಲಳ್ಳಿ, ಜಯಣ್ಣ, ಈಶ್ವರ್ ಸಿಂಗ್, ಉಮೇಶ್ ಶೆಟ್ಟಿ, ಎಸ್. ಎನ್ ಮಳವಳ್ಳಿ, ಶ್ರೀಮತಿ ಅನಿತಾ ಆನಂದಕುಮಾರ್ ಮತ್ತು ಡಾ. ಚೈತಾಲಿ ಹಾಗೂ ಇತರರು ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಕಾರಣರಾದರು.