ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ದಾವಣಗೆರೆ, ಅ.1 – ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳನ್ನು ವಿಭಾಗ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಸಂಘಟಿಸಲಾಗಿದೆ.

 ಇದೇ ದಿನಾಂಕ 5 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪುರುಷರ ಹಾಕಿ, ಪುರುಷ ಮತ್ತು ಮಹಿಳೆಯರ ಬಾಕ್ಸಿಂಗ್ ಮತ್ತು ವೇಟ್ ಲಿಫ್ಟಿಂಗ್, ಅ. 4 ರಂದು ಹ್ಯಾಂಡ್‍ಬಾಲ್ ಮತ್ತು ನೆಟ್‍ಬಾಲ್, ಅ. 6 ರಂದು ಮಹಿಳೆಯರ ಹಾಕಿ.

 ಶಿವಮೊಗ್ಗ ಜಿಲ್ಲೆಯಲ್ಲಿ ದಿನಾಂಕ 6 ಮತ್ತು 7 ರಂದು ಯೋಗ, ಜ್ಯೊಡೋ, ವಾಲಿಬಾಲ್, ಬ್ಯಾಡ್ಮಿಂಟನ್, ಟೆನ್ನಿಸ್, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನಾಂಕ 4 ರಂದು ಫುಟ್ಬಾಲ್, ಚಿತ್ರದುರ್ಗ ಜಿಲ್ಲೆಯಲ್ಲಿ ದಿನಾಂಕ 3 ರಂದು ಈಜು ಮತ್ತು  ದಿನಾಂಕ 4 ರಂದು ಟೇಬಲ್ ಟೆನ್ನೀಸ್, ಬಾಲ್ ಬ್ಯಾಡ್ಮಿಂಟನ್, ಥ್ರೋ ಬಾಲ್.

 ತುಮಕೂರು ಜಿಲ್ಲೆಯಲ್ಲಿ ದಿನಾಂಕ 5 ಮತ್ತು 6 ರಂದು ಅಥ್ಲೆಟಿಕ್ಸ್, ಟೆಕ್ವಾಂಡೋ, ಜೆಮ್ನಾಸ್ಟಿಕ್, ವುಷು ಮತ್ತು ಕಬಡ್ಡಿ, ಬೆಂಗಳೂರು ನಗರ ಜಿಲ್ಲೆಯಲ್ಲಿ  ದಿನಾಂಕ 3 ರಂದು ಅರ್ಚರಿ ಮತ್ತು ಫೆನ್ಸಿಂಗ್ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ದಿನಾಂಕ 6 ರಂದು ಖೋ-ಖೋ, ಬ್ಯಾಸ್ಕೇಟ್, ಬಾಲ್ ಮತ್ತು ಕುಸ್ತಿ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿದೆ. ಆಸಕ್ತ, ಅರ್ಹ ಕ್ರೀಡಾ ಪಟುಗಳು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಗುರುತಿನ ಚೀಟಿಗಳನ್ನು ಪಡೆದು, ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08192-237480 ಸಂಪರ್ಕಿಸಲು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಯಲಕ್ಷ್ಮಿಬಾಯಿ ತಿಳಿಸಿದ್ದಾರೆ.

error: Content is protected !!