ಅಣಜಿಯಲ್ಲಿ ಇಂದು ರಾಸಾಯನಿಕ ಮುಕ್ತ ಕೃಷಿಯ ಮಾರುಕಟ್ಟೆ ಕಾರ್ಯಾಗಾರ

ಅಣಜಿಯಲ್ಲಿ ಇಂದು ರಾಸಾಯನಿಕ ಮುಕ್ತ ಕೃಷಿಯ ಮಾರುಕಟ್ಟೆ ಕಾರ್ಯಾಗಾರ

ದಾವಣಗೆರೆ ತಾಲ್ಲೂಕು ಅಣಜಿ ಗ್ರಾಮದ ತಾ.ಪಂ. ಮಾಜಿ ಅಧ್ಯಕ್ಷ ಎಲ್.ಎಸ್. ತಿಪ್ಪೇಸ್ವಾಮಿ ಅವರ ಆನಗೋಡು ರಸ್ತೆಯಿಂದ ಅಣಜಿ ರಸ್ತೆ ಮಾರ್ಗದಲ್ಲಿರುವ ತೋಟದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಹಾಗೂ ದಾವಣಗೆರೆ ನಾರದಮುನಿ ಕೃಷಿ ಮಾಹಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾರುಕಟ್ಟೆ ಕಾರ್ಯಾಗಾರ ನಡೆಯಲಿದೆ.

ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಆರ್. ಹುಲ್ಲುನಾಚೇಗೌಡರು ಸುಸ್ಥಿರ ಕೃಷಿಯ ಸವಾಲುಗಳು, ಪರಿಹಾರಗಳು ಹಾಗೂ ರಾಸಾಯನಿಕ ಮುಕ್ತ ಕೃಷಿಯಲ್ಲಿ ಬೆಳೆದ ತರಕಾರಿ, ಹಣ್ಣುಗಳು, ಮೌಲ್ಯವರ್ಧನೆ ಮಾಡಿದ ಎಲ್ಲಾ ಆಹಾರ ಪದಾರ್ಥಗಳನ್ನು ಮೈಕ್ರೋಬಿ ಫೌಂಡೇಷನ್ ನಿಂದ ಹೊರ ತಂದಿರುವ ಧಾತು ಮೊಬೈಲ್ ಆಪ್ ಮೂಲಕ ಡಿಜಿಟಲ್ ಮಾರುಕಟ್ಟೆ ಒದಗಿಸುವ ಕುರಿತು ಮಾಹಿತಿ ಮತ್ತು ತರಬೇತಿ ನೀಡುವರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ  ಡಾ. ಚಂದ್ರೇಗೌಡರು ಕೃಷಿ ಹಾಗು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆ ಹಾಗೂ ಸವಾಲುಗಳು ಮತ್ತು ಪರಿಹಾರಗಳು ಕುರಿತು ತರಬೇತಿ ನೀಡಲಿದ್ದಾರೆ ಎಂದು ರಾಜ್ಯ ಕೃಷಿ ಅಭಿಯಾನ ಟ್ರಸ್ಟ್ ನಿರ್ದೇಶಕ ಮಹಾದೇವಪ್ಪ ದಿದ್ದಿಗಿ ಹಾಗೂ ಮೈಕ್ರೋಬಿ ಫೌಂಡೇಷನ್, ದಾವಣಗೆರೆ ವಿಭಾಗದ ಸಂಚಾ ಲಕ ಆರ್. ಯು. ವಿಜಯಕುಮಾರ್ ತಿಳಿಸಿದ್ದಾರೆ.

error: Content is protected !!