ದಾವಣಗೆರೆ, ಸೆ.29- ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ನಗರದ ಎಸ್.ಕೆ.ಪಿ. ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷ ಎಸ್.ಸುನಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬರುವ ಅಕ್ಟೋಬರ್ 8 ರಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 6 ವಿಭಾಗಗಳಲ್ಲಿ ಚುನಾವಣೆ ನಡೆಸಲು ನಿಗದಿಯಾಗಿತ್ತು. ನಾಮಪತ್ರ ಸಲ್ಲಿಸಲು ನಿನ್ನೆ ಕೊನೆ ದಿನವಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುನಿಲ್ ಹೊರತುಪಡಿಸಿ, ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಸುನಿಲ್ ಆಯ್ಕೆ ಅವಿರೋಧವಾಗಿ ನಡೆಯಿತು.
ಸುನಿಲ್, ದಾವಣಗೆರೆ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ವೈ.ಬಿ.ಸತೀಶ್ ಅವರ ಪುತ್ರ. ಸುನಿಲ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ವಾಸವಿ ಯುವಜನ ಸಂಘದ ಮಾಜಿ ಸಂಚಾಲಕ ಬಿ.ಎಸ್.ಶಿವಾನಂದ, ಗೌರವಾಧ್ಯಕ್ಷರಾದ ಬಿ.ಎನ್. ಸಾಯಿಪ್ರಸಾದ್, ಎನ್.ವಿ.ಬದರಿನಾಥ್, ನಿಕಟಪೂರ್ವ ಅಧ್ಯಕ್ಷ ಅಮರಾವತಿ ಡಿ. ರಾಘವೇಂದ್ರ, ಕಾರ್ಯದರ್ಶಿ ಆರ್.ಎನ್.ಅಜಿತ್, ಖಜಾಂಚಿ ಬಿ.ಎಸ್.ರಾಘವೇಂದ್ರ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.