ಮಕ್ಕಳಿಂದ ಧಾರ್ಮಿಕ ಭಕ್ತಿ ಮಂತ್ರ ಪಠಣ

ಮಕ್ಕಳಿಂದ ಧಾರ್ಮಿಕ ಭಕ್ತಿ ಮಂತ್ರ ಪಠಣ

ರಾಣೇಬೆನ್ನೂರು, ಸೆ. 29- ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ವಂದೇ ಮಾತರಂ ಸಂಸ್ಥೆಯವರು ನಿರ್ಮಿಸಿರುವ ಅಯೋಧ್ಯೆ ರಾಮ ಮಂದಿರ ಮತ್ತು ರಾಣೇಬೆನ್ನೂರ್ ಕಾ ರಾಜಾ ಗಣಪತಿ ಪ್ರತಿಷ್ಟಾಪಿಸಿರುವ ಗಣೇಶೋತ್ಸವದ ಅಂಗವಾಗಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು `ಗಣಪತಿ ಅಥರ್ವಶೀರ್ಷ’ ಭಕ್ತಿ ಸ್ತೋತ್ರ ಪಠಣಗಳನ್ನು ಭಕ್ತಿ, ಶ್ರದ್ಧೆಯಿಂದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತು ನಿಮಿಷಗಳ ಕಾಲ ಪಠಿಸುವುದರ ಮೂಲಕ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದರು.

ಸ್ತೋತ್ರ ಪಠಣ ಮಾಡುವುದರ ಪ್ರಮುಖ ಉದ್ದೇಶವೇನೆಂದರೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವುದು ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವುದರ ಮೂಲಕ ಹಬ್ಬಗಳ ಆಚರಣೆ ಮತ್ತು ಅವುಗಳ ವಿಶೇಷತೆಯನ್ನು ತಿಳಿಸುವುದು. 

ಕಾರ್ಯಕ್ರಮದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಸುದೇವ ಸಾ ಲದ್ವಾ, ಪ್ರಧಾನ ಕಾರ್ಯದರ್ಶಿ ನಾಗೇಶ ಮುರುಡಣ್ಣವರ, ನಿರ್ದೇಶಕರುಗಳಾದ ತುಳಜಪ್ಪ ಲದ್ವಾ, ಮಲ್ಲಿಕಾರ್ಜುನ ಅಂಗಡಿ, ಶಾಲೆಯ ಪ್ರಾಚಾರ್ಯ ಎಸ್. ಪ್ರಕಾಶ  ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು. 

error: Content is protected !!