ಶರಣರು ಸಾಕಷ್ಟು ಪರೀಕ್ಷೆ ಎದುರಿಸಿ ಗೆದ್ದವರು : ಬಿ.ಎಲ್.ಶಂಕರ್

ಶರಣರು ಸಾಕಷ್ಟು ಪರೀಕ್ಷೆ ಎದುರಿಸಿ ಗೆದ್ದವರು : ಬಿ.ಎಲ್.ಶಂಕರ್

ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ಸಾಣೇಹಳ್ಳಿ, ಸೆ.28- ಶ್ರೀ ತರಳಬಾಳು ಜಗದ್ಗುರು ಶಾಖಾ ಶ್ರೀಮಠ ಸಾಣೇಹಳ್ಳಿಯಲ್ಲಿ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಗಳವರ 31ನೇ ಶ್ರದ್ಧಾಂಜಲಿ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಗುರುಗಳು ಇದ್ದಿದ್ದರೆ ಯಾವ ಧರ್ಮ ಸನಾತನ, ಪುರಾತನ, ಆಧುನಿಕ ಯಾವುದೇ ಆಗಿದ್ದರು ಅನಿಷ್ಟಗಳನ್ನು ಒಳಗೊಂಡಿದ್ದರೆ ಅದನ್ನು ವಿರೋಧಿಸಬೇಕೆಂದು ಹೇಳುತ್ತಿದ್ದರು. ತಳವರ್ಗದಿಂದ ಬಂದಂತವರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುವ ಹೃದಯ ಶ್ರೀಮಂತಿಕೆ ಹಿರಿಯ ಗುರುಗಳಿಗಿತ್ತು. ಅಂತ ಚೇತನವನ್ನು ಮತ್ತೆ ಮತ್ತೆ ಸ್ಮರಣೆ ಮಾಡಿಕೊಂಡರೆ ನಮ್ಮೆಲ್ಲರ ಬದುಕಿಗೆ ಸ್ಪೂರ್ತಿ ತರುವಂತಹ ಚೈತನ್ಯವನ್ನು ಪಡೆದಂತೆ ಎಂದು  ನುಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಇಂದು ಹಮ್ಮಿಕೊಂಡಿರುವ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಡುಪಿಯ ಆದರ್ಶ ಆಸ್ಪತ್ರೆಯ ಡಾ. ಜಿ. ಎಸ್. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಯಶಸ್ವಿಗೊಂಡಿದೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ಚಿಂತಕ ಬಿ.ಎಲ್. ಶಂಕರ್‍ ಗುರು ಸ್ಮರಣೆ  ಮಾಡಿ ಮಾತನಾಡಿ, ಸಮಾನತೆಯ ಅವಕಾಶವನ್ನು ಬುದ್ಧ, ಬಸವಣ್ಣ  ಅಂದೇ ನೀಡಿದ್ದರು. ಶರಣರು ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿ ಗೆದ್ದವರು. ಶತಮಾನಕ್ಕೆ ಒಬ್ಬರು, ಸಹಸ್ರಮಾನಕ್ಕೊಬ್ಬರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಹಿರಿಯ ಗುರುಗಳು ರಂಗಭೂಮಿಯ ಬಗ್ಗೆ ಆಸಕ್ತಿ ಉಳ್ಳವರು. ಸ್ವತಃ ನಾಟಕ ರಚಿಸಿದವರು ಅವರ ಕರಕಮಲ ಸಂಜಾತರಾಗಿ ಬಂದ ಸಾಣೇಹಳ್ಳಿ ಶ್ರೀಗಳು ಅದನ್ನು ಮುಂದುವರೆಸಿ ರಂಗಚಟುವಟಿಕೆಗಳನ್ನು ನಡೆಸಿ ಸಾಹಿತ್ಯ, ಸಂಗೀತದ ರಾಯಭಾರಿಗಳಾಗಿದ್ದಾರೆ. ಪೂಜ್ಯರು ಸವಾಲುಗಳನ್ನು ಮೆಟ್ಟಿ ಉತ್ತಮ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಡಾ.ಜಿ. ಎಸ್ ಚಂದ್ರಶೇಖರ್ ಮಾತನಾಡಿ, `ಮತ್ತೆ ಕಲ್ಯಾಣ’ ಕಾರ್ಯಕ್ರಮವು ಉಡುಪಿಯಲ್ಲಿ ನಡೆದಾಗ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿ ಗೊಳ್ಳುವಂತಾಯಿತು. ಸ್ವಾಮೀಜಿಯವರ ಚಿಂತನೆ ಬಸವ ತತ್ವ ಪ್ರಚಾರ, ಶೈಕ್ಷಣಿಕ, ರಾಜಕೀಯವಾಗಿ ಉತ್ತಮವಾದ ಕಾರ್ಯ ಮಾಡಿದ್ದಾರೆ. ಪ್ರತಿ ವರ್ಷವೂ ಆರೋಗ್ಯ ತಪಾಸಣಾ ಶಿಬಿರವನ್ನು ಮಾಡಿಕೊಡುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಎ. ಸಿ. ಚಂದ್ರಣ್ಣ, ಬಸವಲಿಂಗಯ್ಯ    ಮಾತನಾಡಿದರು. ಶಿವಸಂಚಾರ ಕಲಾತಂಡದವರು ವಚನ ಗೀತೆಗಳನ್ನು ಹಾಡಿದರು.

ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ವಚನ ನೃತ್ಯ, ಜಾನಪದ ನೃತ್ಯ ಹಾಗೂ ಕಿರು ನಾಟಕವನ್ನು ಪ್ರದರ್ಶಿಸಿದರು. 

ನಂತರ ಶಿವಕುಮಾರ ಕಲಾಸಂಘದ ಕಲಾವಿದರು ರಾಜಶೇಖರ ಹನುಮಲಿ ರಚನೆಯ, ವೈ. ಡಿ. ಬದಾಮಿ ನಿರ್ದೇಶನದ ಮಹಾಬೆಳಗು ನಾಟಕ ಪ್ರದರ್ಶಿಸಿದರು. ಕಾವ್ಯ ಎನ್. ಆರ್ ಸ್ವಾಗತಿಸಿದರು. ಕಾವ್ಯ ಹೆಚ್. ಆರ್ ನಿರೂಪಿಸಿ, ವಂದಿಸಿದರು.

error: Content is protected !!