ಸಿ.ಜಿ. ಆಸ್ಪತ್ರೆಯಲ್ಲಿ ಕನ್ನಡಕ ವಿತರಣೆ

ದಾವಣಗೆರೆ, ಸೆ.28- ಸಣ್ಣ ಅಕ್ಷರ ಓದಲು ಬರೆಯಲು ಸಾಧ್ಯವಾಗದವರು, ಕಾಳುಗಳನ್ನು ಹಸನು ಮಾಡಲು ತೊಂದರೆ ಇರುವವರು, ಸೂಜಿಗೆ ದಾರ ಪೋಣಿಸಲಿಕ್ಕೆ ಆಗದೇ ಇರುವ,   ಸಮೀಪ ದೃಷ್ಟಿಗೆ ಸಂಬಂಧಿಸಿದಂತೆ ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ  ಕನ್ನಡಕಗಳನ್ನು  ಬರುವ ಅಕ್ಟೋಬರ್ 1ರಂದು ಬೆಳಿಗ್ಗೆ 9ರಿಂದ 1 ಗಂಟೆವರೆಗೆ  ಉಚಿತವಾಗಿ ವಿತರಿಸಲಾಗುವುದು  

ಚಿಗಟೇರಿ  ಜಿಲ್ಲಾ  ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕ, ರೂ.ನಂ. 126 ರಲ್ಲಿ ವಿತರಿಸಲಾಗುವ ಕನ್ನಡ ಪಡೆಯಲಿಚ್ಚಿಸುವ ಫಲಾನುಭವಿಗಳು ಬಿಪಿಎಲ್ ಕಾರ್ಡ್‌ನ ಪ್ರತಿ ಮತ್ತು ಕನ್ನಡಕದ ನಂಬರ್ ಇರುವ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು   ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ವಿವರಕ್ಕೆ: 9980969791 ಸಂಪರ್ಕಿಸಿ.

error: Content is protected !!