ಯುವ ಪ್ರತಿಭೆ ಪೃಥ್ವಿ ಶಾಮನೂರು ಅವರಿಗೆ `ಸೈಮಾ’ ಅವಾರ್ಡ್

ದಾವಣಗೆರೆ, ಸೆ. 28-  ಕನ್ನಡ ಚಿತ್ರರಂಗ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಶಾಮನೂರಿನ ಯುವ ಪ್ರತಿಭೆ, ನಾಯಕ ನಟ ಪೃಥ್ವಿ ಶಾಮನೂರು `ಸೌಥ್ ಇಂಡಿಯಾ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್'(ಸೈಮಾ) ನಿಂದ ಬೆಸ್ಟ್ ಕನ್ನಡ ಡೆಬ್ಯೂಯೆಂಟ್ ಆಕ್ಟರ್ ಪ್ರಶಸ್ತಿ ಲಭಿಸಿದೆ ಎಂದು ಹ್ಯಾಪಿ ಇವೆಂಟ್ಸ್ ಮಯೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದುಬೈನಲ್ಲಿ ಸೆ. 15 ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.

`ಪದವಿ ಪೂರ್ವ’ ಚಿತ್ರದಲ್ಲಿನ ಅಮೋಘ ನಟನೆಗಾಗಿ ಸೈಮಾ ಬೆಸ್ಟ್ ಕನ್ನಡ ಡೆಬ್ಯೂಯೆಂಟ್ ಆಕ್ಟರ್ ಪ್ರಶಸ್ತಿ ಪಡೆದಿರುವ ಪೃಥ್ವಿ ಆರ್.ಜಿ. ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹ್ಯಾಪಿ ಇವೆಂಟ್ಸ್‌ನ ಕಾರ್ತಿಕ್ ಹಿರೇಮಠ್, ನವೀನ್, ಗ್ರೀನ್ ಪಾರ್ಕ್ ಹೋಟೆಲ್‌ನ ನಿಖಿತ್ ಶೆಟ್ಟಿ ಉಪಸ್ಥಿತರಿದ್ದರು. 

error: Content is protected !!