ವಜ್ರೇಶ್ವರಿಯಿಂದ ಶಿಕ್ಷಕರ ದಿನಾಚರಣೆ

ವಜ್ರೇಶ್ವರಿಯಿಂದ ಶಿಕ್ಷಕರ ದಿನಾಚರಣೆ

ದಾವಣಗೆರೆ, ಸೆ. 28- ಶ್ರೀ ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆಯನ್ನು ಸಿದ್ದವೀರಪ್ಪ ಬಡಾವಣೆಯಲ್ಲಿ ಇರುವ ಕಾನ್ವೆಂಟ್‌ನಲ್ಲಿ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಸುಜಾತ ನಾಗೇಶ್ ಹಾಗೂ ಲಕ್ಷ್ಮಿ ಸುಮಂತ್ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಜ್ರೇಶ್ವರಿ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ವಿಜಯ ಸಿ. ಅಕ್ಕಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪ್ರೇಮ, ಮಮತಾ, ಸಂಸ್ಥೆಯ ಕಮಿಟಿ ಮೆಂಬರ್ ಹಾಗೂ  ಇತರರು ಉಪಸ್ಥಿತರಿದ್ದರು. ಚಂದ್ರಿಕಾ ವೇಣುಗೋಪಾಲ್ ನಿರೂಪಿ ಸಿದರು. ಗೀತಾ ಪ್ರಭಾಕರ್ ಪ್ರಾರ್ಥಿಸಿದರು. ಚಂದ್ರಿಕಾ ಜಗನ್ನಾಥ್ ಸ್ವಾಗತಿಸಿದರು.  ಪುಷ್ಪಲತಾ ವಂದಿಸಿದರು.

error: Content is protected !!