ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉದ್ಬವಿಸಿರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಇಂದು ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯಾಧ್ಯಕ್ಷ ವಿ. ಅವಿನಾಶ್ ತಿಳಿಸಿದ್ದಾರೆ.
ಸುಮಾರು 245 ವರ್ಷಗಳ ಇತಿಹಾಸವಿರುವ ಬ್ರಿಟಿಷರ ಕಾಲದ ಮದ್ರಾಸ್ ಪ್ರಾಂತ್ಯದ ಈ ಹಿಂದೆ ರಚಿಸಿರುವ ಕಾವೇರಿ ನದಿನೀರು ಹಂಚಿಕೆ ಪ್ರಾಧಿಕಾರ ಸಮಿತಿಯನ್ನು ಮೊದಲು ವಿಸರ್ಜಿಸಿ ಪುನರ್ ನವೀಕರಣಗೊಳಿಸಿ ಹೊಸ ಸದಸ್ಯರ ನೇಮಕ ಮಾಡಲು ಹಕ್ಕೊತ್ತಾಯಿಸುತ್ತಾ, ವಾಸ್ತವ ಸ್ಥಿತಿಯನ್ನು ಸರ್ವೋಚ್ಚ ನ್ಯಾಯಲಯಕ್ಕೆ ಮನವರಿಕೆ ಮಾಡುವಂತ ಕಾನೂನು ತಜ್ಞರನ್ನು ನೇಮಿಸಬೇಕು. ಈ ಸಮಯದಲ್ಲಿ ಎರಡು ರಾಜ್ಯಗಳಲ್ಲಿ ವೈಷಮ್ಯ ಬಿತ್ತುವಂತ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ಜಯದೇವ ವೃತ್ತದಿಂದ ಎ.ಸಿ. ಕಛೇರಿಯವರೆಗೆ ಪಾದಯಾತ್ರೆ ಮೂಲಕ ಹೋಗಿ ಮನವಿ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.