ದಾವಣಗೆರೆ, ಸೆ. 28 – ಮುತ್ತುಗದೂರು ತರಳಬಾಳು ವೃತ್ತದಲ್ಲಿ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ವಿಶ್ರಾಂತಿ ಧಾಮದಲ್ಲಿ ಲಿಂಗೈಕ್ಯರಿಗೆ ಶ್ರದ್ಧಾಂಜಲಿ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಸಭೆ ನಡೆಯಿತು.
ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ರೋಮಾಜಪ್ಪ, ಮುಖಂಡರಾದ ರುದ್ರಪ್ಪ, ಓಂಕಾರಪ್ಪ, ನಾಗರಾಜ್ ನುಡಿ ನಮನ ಸಲ್ಲಿಸಿದರು. ಡಾ.ಎಚ್.ವಿ.ವಾಮದೇವಪ್ಪ, ಬಿ.ಟಿ.ಪುಟ್ಪಪ್ಪ ಮತ್ತಿತರರು ಉಪಸ್ಥಿತರಿದ್ದರು.