ಶ್ರೀ ಸುಪಾರ್ಶ್ವನಾಥ ಜೈನ್ ಮೈನಾರಿಟಿ ಸಹಕಾರಿ ವಾರ್ಷಿಕ ಸಭೆ

ಶ್ರೀ ಸುಪಾರ್ಶ್ವನಾಥ ಜೈನ್ ಮೈನಾರಿಟಿ ಸಹಕಾರಿ ವಾರ್ಷಿಕ ಸಭೆ

ದಾವಣಗೆರೆ, ಸೆ. 27- ಶ್ರೀ ಸುಪಾರ್ಶ್ವನಾಥ ಜೈನ್ ಮೈನಾರಿಟಿ ಸೌಹಾರ್ದ ಸಹಕಾರಿ ನಿಯಮಿತದ ಆರನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಗರದ ಕಾಯಿಪೇಟೆಯ ಶ್ರೀ ಸಂಕೇಶ್ವರ ಪಾರ್ಶ್ವ ರಾಜೇಂದ್ರ ಭವನದಲ್ಲಿ ನಡೆಯಿತು.

ಸಹಕಾರಿಯ ಅಧ್ಯಕ್ಷ ಸಂಘವಿ ಮಹಾವೀರ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸದಾಗಿ ಬಾಲ್ ಬಚತ್ ಯೋಜನೆಯ ಬಗ್ಗೆ ಸಭೆಗೆ ತಿಳಿಸಿಕೊಟ್ಟರು. 

ಈ ಯೋಜನೆಯಲ್ಲಿ ಮಕ್ಕಳಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಒಂದು ವಿಶಿಷ್ಟ ಮತ್ತು ವಿನೂತನ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. 

2022-23ನೇ ಸಾಲಿನಲ್ಲಿ ತಮ್ಮ ಸೌಹಾರ್ದ ಸಹಕಾರಿ 9 ಲಕ್ಷ ರೂ. ಲಾಭ ಗಳಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪೂನಂ ಚಂದ್‌ಜಿ, ಎಂ.ಆರ್. ಪ್ರಭುದೇವ, ಹೆಚ್.ಎಂ. ನಾಗ ರಾಜ್, ಎನ್.ಜಿ. ಗಿರೀಶ್ ನಾಡಿಗ್, ಎಸ್. ಶಶಿಕುಮಾರ್  ಭಾಗವಹಿಸಿ ಮಾತನಾಡಿದರು.

ಕುಂದನ್‌ ಸ್ವಾಗತಿಸಿದರು. ಪೂಲ್‌ಚಂದ್ ಅಂಬಾಲಾಲ್ ಕಳೆದ ಸಾಲಿನ ನಡಾವಳಿ ಓದಿದರು. ಅಶೋಕ್‌ಕುಮಾರ್ ಜೈನ್ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. 

ಆರ್. ರಾಜೇಂದ್ರ ಪ್ರಸಾದ್ ಅನುಪಾಲನ ವರದಿ ಮಂಡಿಸಿದರು. ದಿವ್ಯ ಎಸ್. ಜೈನ್ ನಿರೂಪಿಸಿದರು. ಜಯಚಂದ್ ಜಿ ವಂದಿಸಿದರು.

error: Content is protected !!