ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆಯ ಅನಾವರಣ, ಛಾಯಾಚಿತ್ರ ಪ್ರದರ್ಶನ

ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆಯ ಅನಾವರಣ, ಛಾಯಾಚಿತ್ರ ಪ್ರದರ್ಶನ

ಹರಿಹರ,ಸೆ.27- ಕೇಂದ್ರ  ಸಂವಹನ ಇಲಾಖೆ (ಶಿವಮೊಗ್ಗ) ವತಿಯಿಂದ ಹರಿಹರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರದ ಒಂಭತ್ತು ವರ್ಷಗಳ ಸಾಧನೆಗಳ ಛಾಯಾಚಿತ್ರ ಪ್ರದರ್ಶನ ಮತ್ತು  ಪೋಷಣ್ ಮಾಸಾಚರಣೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಮಂಗಳವಾರ ಉದ್ಘಾಟಿಸಿದರು.

ಕೃಷಿ ಸಿಂಚಾಯಿ ಯೋಜನೆ, ಸಾಯಿಲ್ ಹೆಲ್ತ್ ಕಾರ್ಡ್, ಕಿಸಾನ್ ಸಮ್ಮಾನ್, ನೀಮ್ ಕೋಟೆಡ್ ಯೂರಿಯಾ, ಮೇರಿ ಮೀಟಿ ಮೇರಾ ದೇಶ್, ಏಕ ಭಾರತ ಶ್ರೇಷ್ಠ ಭಾರತ, ಆಯುಷ್ಮಾನ್ ಭಾರತ್, ಒಂದು ರಾಷ್ಟ್ರ ಒಂದು ಮಾರುಕಟ್ಟೆ, ಒಂದು ತೆರಿಗೆ, ಕೃಷಿ ನಿರ್ವಹಣೆಯಲ್ಲಿ ಪರ್ಯಾಯ ಪೋಷಕಾಂಶ ಗಳ  ಬಳಕೆಗೆ ಉತ್ತೇಜನ ನೀಡುವ ಪಿಎಂ ಪ್ರಣಾಮ್ ಯೋಜನೆಗಳು ಗಮನ ಸೆಳೆದವು. 

ವಿಶೇಷವಾಗಿ ಪೋಷಣ್ ಮಾಸಾ ಚರಣೆ ಅಂಗವಾಗಿ ಪೋಷ ಕಾಂಶ ಆಹಾರ ಪದಾರ್ಥಗಳ ಪ್ರದರ್ಶನ ನಡೆಯಿತು. ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆಯಡಿ ಆರು ಸಾವಿರ ರೂ. ಸೌಲಭ್ಯ ಪಡೆದ ನೂರಕ್ಕೂ ಅಧಿಕ ತಾಯಂದಿರು ಭಾಗವಹಿಸಿದ್ದರು.

ಶಾಸಕ ಬಿ.ಪಿ.ಹರೀಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷರಾದ ನಿಂಬಕ್ಕ ನಿಂಗಪ್ಪ ಚಂದಾಪುರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೂರ್ಣಿಮಾ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಸಿ.ಹೆಚ್.ಅಕ್ಷತಾ, ಲಕ್ಷ್ಮೀಕಾಂತ್‌ ಉಪಸ್ಥಿತರಿದ್ದರು.

error: Content is protected !!