ದಸರಾ ಕ್ರೀಡಾಕೂಟದಲ್ಲಿ ಜಿಎಂಐಟಿ ವಿದ್ಯಾರ್ಥಿಗಳ ಸಾಧನೆ

ದಸರಾ ಕ್ರೀಡಾಕೂಟದಲ್ಲಿ  ಜಿಎಂಐಟಿ ವಿದ್ಯಾರ್ಥಿಗಳ ಸಾಧನೆ

ದಾವಣಗೆರೆ, ಸೆ. 27- ಜಿ.ಪಂ. ದಾವಣಗೆರೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಹಾಲೇಶ್ ಕುಮಾರ್ ಕೆ.ಜಿ. (100ಮೀ. ಪ್ರಥಮ) ಮತ್ತು ಅಕ್ಷಯ್ ಎಸ್.ಕೆ. (100ಮೀ. ದ್ವಿತೀಯ ಮತ್ತು 200.ಮೀ ದ್ವಿತೀಯ)  ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.

ಈ ಕ್ರೀಡಾಪಟುವಿಗೆ ಕಾಲೇಜಿನ ನಿರ್ವಹಣಾ ಪ್ರತಿನಿಧಿ ವೈ.ಯು.ಸುಭಾಶ್ಚಂದ್ರ, ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ ಹಾಗೂ ಕ್ರೀಡಾ ಸಂಯೋಜಕ  ಡಾ. ಹೆಚ್.ಎಸ್. ಕಿರಣ್‍ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಬಿ. ಅಜ್ಜಯ್ಯ, ಕ್ರೀಡಾ ಸಹಾಯಕ ವೈ. ಹನುಮಂತಪ್ಪ ಅಭಿನಂದಿಸಿದ್ದಾರೆ.

error: Content is protected !!