ಕುಂಬಳೂರಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ
ಮಲೇಬೆನ್ನೂರು, ಸೆ. 27- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕಳೆದ ವಾರ ಉಡುಪಿಯಿಂದ ದಾವಣಗೆರೆಗೆ ತೆರಳುವ ಮಾರ್ಗ ಮಧ್ಯೆ ಕುಂಬಳೂರು ಗ್ರಾಮದ ಗಂಗಾ ಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಸಲ್ಲಿಸಿದ ನಂತರ ಗಂಗಾಮತ ಸಮಾಜದವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಈ ಹಿಂದೆ ಉಡುಪಿ
ಶಾಸಕನಾಗಿ, ಮೀನುಗಾರಿಕೆ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವನಾಗಿ, ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ರಾಜ್ಯದಲ್ಲಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದರು.
ಗಂಗಾಮತ ಸಮಾಜದವರು ರಾಜ್ಯದಿಂದ ಈಗ ಯಾರೂ ಎಂಪಿ ಆಗಿಲ್ಲ. ಈ ಬಾರಿ ನನಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ಸಮಾಜದವರು ಬೆಂಬಲ ನೀಡಬೇಕೆಂದು ಪ್ರಮೋದ್ ಮಧ್ವರಾಜ್ ಮನವಿ ಮಾಡಿದರು.
ಹರಿಹರ ತಾ.ಪಂ. ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಹಾಲಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಹೆಚ್. ಬಸವರಾಜ್,
ಕರಡೇರ ಸೋಮಣ್ಣ,
ಕಡೇಮನಿ ಪುಟ್ಟಪ್ಪ, ಡಿ. ಕುಬೇರಪ್ಪ, ಕೆ. ಬಸವರಾಜ್, ಎಸ್.ಹೆಚ್. ಜಯ್ಯಪ್ಪ, ಬಾರ್ಕಿ ಚಂದ್ರಪ್ಪ, ಬಲ್ಲೂರು ನಾಗರಾಜ್, ಎಂ.ಹೆಚ್. ಪರಮೇಶ್ವರಪ್ಪ, ಎಂ.ಹೆಚ್. ರಮೇಶ್, ಎಂ. ವಾಸುದೇವಮೂರ್ತಿ, ನಿಟ್ಟೂರಿನ
ನಾಗಣ್ಣ, ಅಂಜಿನಪ್ಪ, ಮಲೇಬೆನ್ನೂರು ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಕಣ್ಣಾಳ್ ಧರ್ಮಣ್ಣ, ಕಣ್ಣಾಳ್ ಹನುಮಂತಪ್ಪ, ಮಲೇಬೆನ್ನೂರು ಹೋಬಳಿ ಗಂಗಾಮತ ಸಮಾಜದ ಅಧ್ಯಕ್ಷ ಪವನ್ ಕುಮಾರ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.