ಪಿಯುಸಿ ಕಾಲೇಜಿಗೆ ಭೇಟಿ: ಅವ್ಯವಸ್ಥೆಗೆ ಶಾಸಕರ ದಿಗ್ಭ್ರಮೆ!

ಪಿಯುಸಿ ಕಾಲೇಜಿಗೆ ಭೇಟಿ: ಅವ್ಯವಸ್ಥೆಗೆ ಶಾಸಕರ ದಿಗ್ಭ್ರಮೆ!

ಕೊಡಗನೂರಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದ ಮಾಯಕೊಂಡ ಶಾಸಕ  ಕೆ.ಎಸ್.ಬಸವಂತಪ್ಪ

ದಾವಣಗೆರೆ, ಸೆ. 27 – ತಾಲ್ಲೂಕಿನ ಕೊಡಗನೂರು ಸರ್ಕಾರಿ ಪಿಯು ಕಾಲೇಜಿಗೆ ಬುಧವಾರ ಮಾಯಕೊಂಡ ಶಾಸಕ ಕೆ‌.ಎಸ್.ಬಸವಂತಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿನ ಅವ್ಯವಸ್ಥೆ ಕಂಡು ದಿಗ್ಭ್ರಮೆಗೊಂಡರು.

ಕಾಲೇಜಿನಲ್ಲಿನ ಅವ್ಯವಸ್ಥೆ ಕಂಡು ದಂಗಾದ ಶಾಸಕರು, ಧೂಳು ಹಿಡಿದ ಕೊಠಡಿಗಳು, ಸ್ವಚ್ಛತೆ ಇಲ್ಲದ ಪರಿಸರ, ವಿದ್ಯಾರ್ಥಿಗಳ ಹಾಜ ರಾತಿ ಇಲ್ಲದಿರುವುದು, ಶಾಲಾಭಿವೃದ್ಧಿ ಸಮಿತಿ ರಚಿಸದಿರುವುದು ಹೀಗೆ ಅವ್ಯವಸ್ಥೆ ಇರುವುದ ನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಕಾಲೇಜಿನ ಪರಿಸರ ಸ್ವಚ್ಛತೆ ಕಾಪಾಡುವುದು, ಕೊಠಡಿಗಳನ್ನು ದುರಸ್ತಿ ಮಾಡುವುದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸು ವುದು, ಶಾಲಾಭಿವೃದ್ಧಿ ಸಮಿತಿ ರಚಿಸಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತೆ ಉಪನ್ಯಾಸಕ ರಿಗೆ ಸೂಚನೆ ನೀಡಿದರು. ಈ ವೇಳೆ ಪ್ರಾಂಶು ಪಾಲರ ಗೈರು ಹಾಜರಿ ಎದ್ದು ಕಂಡಿತು.

ಈ ಸಂದರ್ಭದಲ್ಲಿ ಆಸ್ಪತ್ರೆ, ಉರ್ದು ಶಾಲೆ, ಸರ್ಕಾರಿ ಪ್ರೌಢಶಾಲೆ, ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಡಗನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ವೈದ್ಯಕೀಯ ಚಿಕಿತ್ಸೆ, ನರ್ಸ್‌ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ನಿಮಗೆ ಸರಿಯಾಗಿ ಸ್ಪಂದಿಸುತ್ತಾರಾ ? ಎಂದು ರೋಗಿಗಳನ್ನು ಪ್ರಶ್ನಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಚಿಕಿತ್ಸೆ ನೀಡಿ, ಅವರನ್ನು ಗುಣ ಮುಖರನ್ನಾಗಿಸಿ ಮನೆಗೆ ಕಳುಹಿಸಬೇಕೆಂದು ವೈದ್ಯರಿಗೆ ಸೂಚನೆ ನೀಡಿದರು.

ಬಳಿಕ ಸರ್ಕಾರಿ ಪ್ರಾಥಮಿಕ ಶಾಲೆ, ಉರ್ದು ಶಾಲೆ, ಸರ್ಕಾರಿ ಪ್ರೌಢಶಾಲೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಕೊಠಡಿಗಳನ್ನು ವೀಕ್ಷಿಸಿ, ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು. 

ಮಧ್ಯಾಹ್ನ  ಬಿಸಿಯೂಟ ನೀಡುವ ವೇಳೆ ಶಾಲೆಗೆ ಭೇಟಿ ನೀಡಿದ ಶಾಸಕರು, ಮಕ್ಕಳಿಗೆ ಬಡಿಸಿದ ಬಿಸಿಯೂಟ ಸವಿದು ಆಹಾರದ ಗುಣಮಟ್ಟ ಪರಿಶೀಲಿಸಿದರು. ಪ್ರತಿನಿತ್ಯ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಅಶೋಕ್, ರಾಜಶೇಖರ್, ರೇವಣಸಿದ್ದಪ್ಪ,ಕುಬೇರಪ್ಪ,ಲಕ್ಷ್ಮಣ, ಸುರೇಶ , ಗ್ರಾಪಂ ಅಧ್ಯಕ ಸಿದ್ದಪ್ಪ, ವಿಜಯಣ್ಣ, ಎಸ್ ಡಿಎಂಸಿ ಅಧ್ಯಕ್ಷ ವಾಸು,  ಗ್ರಾ.ಪಂ. ಸದಸ್ಯ ಬಾಬು, ನಾಗರಾಜ್,ಯುವರಾಜ್, ಪ್ರಕಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ಬಸವ ರೆಡ್ಡಿ ಸೇರಿದಂತೆ ಇನ್ನಿತರರಿದ್ದರು.

error: Content is protected !!