ತಾಲ್ಲೂಕು ದಸರಾ ಕ್ರೀಡಾಕೂಟ ಜಿಎಂಐಟಿ ವಿದ್ಯಾರ್ಥಿಗಳ ಸಾಧನೆ

ತಾಲ್ಲೂಕು ದಸರಾ ಕ್ರೀಡಾಕೂಟ  ಜಿಎಂಐಟಿ ವಿದ್ಯಾರ್ಥಿಗಳ ಸಾಧನೆ

ದಾವಣಗೆರೆ,ಸೆ.26- ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್  ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ    ಆಯೋಜಿಸಿದ್ದ    ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ದಲ್ಲಿ ಜಿ. ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ರಕ್ಷಿತ ಹೆಚ್. ಬಿ (100ಮೀ ಓಟ ದ್ವಿತೀಯ), ಹಾಲೇಶ್ ಕುಮಾರ ಕೆ.ಜಿ (100 ಮೀ-ಪ್ರಥಮ ಮತ್ತು 4×100ಮೀ ರಿಲೇ ದ್ವಿತೀಯ), ಅಕ್ಷಯ್ ಎಸ್.ಕೆ (100 ಮೀ-ದ್ವಿತೀಯ, 200ಮೀ ಪ್ರಥಮ & 4×100ಮೀ ರಿಲೇ ದ್ವಿತೀಯ), ಮನೋಜ್ ಬಿ.ಎಮ್(4×100ಮೀ ರಿಲೇ ದ್ವಿತೀಯ) ಮತ್ತು ತೇಜಸ್ ವಿ.ಎಂ.(4×100ಮೀ ರಿಲೇ  ದ್ವಿತೀಯ) ಸ್ಥಾನ ಪಡೆದಿದ್ದಾರೆ.

error: Content is protected !!