ಬೆಳ್ಳೂಡಿ ಮಠದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹಿಂದುಳಿದ ಜನರಿಗೆ ಕಾಗಿನೆಲೆ ಶ್ರೀಗಳ ಕಿವಿಮಾತು
ಮಲೇಬೆನ್ನೂರು, ಸೆ. 26 – ಶಾಪ ಗ್ರಸ್ತ ಹಬ್ಬಗಳ ಆಚರಣೆ ಬಿಟ್ಟು, ಆ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿದರೆ ಮುಂದೆ ಅವರಿಂದ ನಿಮ್ಮ ಮನೆಗೆ ಮಾತ್ರವಲ್ಲ, ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಿಂದುಳಿದ ಸಮಾಜದವರಿಗೆ ಕಿವಿ ಮಾತು ಹೇಳಿದರು.
ಬೆಳ್ಳೂಡಿ ಶಾಖಾ ಮಠದ ಸಮುದಾಯ ಭವನದಲ್ಲಿ ಹರಿಹರ ತಾಲ್ಲೂಕು ಕನಕ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸತ್ತವರ ಹೆಸರಿನಲ್ಲಿ ಕುರಿ ಕಡಿದು ಹಬ್ಬ ಆಚರಿಸುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ ಶ್ರೀಗಳು, ನಾವು ಮಾಂಸಾಹಾರಿ ವಿರೋಧಿ ಅಲ್ಲ, ಮಾಂಸಹಾರ ಊಟದ ಪದ್ಧತಿ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ನಿಮ್ಮ ಬಾಯಿ ಚಪಲಕ್ಕಾಗಿ ಮಾಡುತ್ತಿರುವ ಹಬ್ಬಗಳಿಂದ ನೀವು ಮತ್ತು ನಿಮ್ಮ ಸಮಾಜ ಎಲ್ಲಾ ದೃಷ್ಠಿಯಿಂದ ಹಿಂದುಳಿಯುತ್ತದೆ ಎಂಬ ಅರಿವು ನಿಮಗಿರಲಿ ಎಂದು ಸ್ವಾಮೀಜಿ ಹಿಂದುಳಿದ ಜನರನ್ನು ಎಚ್ಚರಿಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ. ಬಸವರಾಜ್ ಎಲ್. ಲಕ್ಕಣ್ಣನವರ ಮಾತನಾಡಿ, ಕುರುಬ ಸಮಾಜವು ಉನ್ನತ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದು, ಶ್ರೀಗಳು ನಿರಂತರ ಸಂಘಟನೆಯಿಂದಾಗಿ ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಹೆಜ್ಜೆ ಇಟ್ಟಿದೆ ಎಂದರು.
ಧಾರವಾಡ ವಿ.ವಿ. ಸಹ ಪ್ರಧ್ಯಾಪಕ ಎನ್. ಹನುಮಂತ ಮಾತನಾಡಿದರು. ಹರಿಹರ ತಾಲ್ಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಕೆ.ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರಾದ ಬಿಎಸ್ಫ್ ಕಮಾಂಡರ್ ಡಾ. ಮೈದುಲ ಮಾತನಾಡಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಹರಿಹರ ನಗರ ಸಭೆ ಅಧ್ಯಕ್ಷೆ ಶ್ರೀಮತಿ ನಿಂಬಕ್ಕ ಚಂದಾಪುರ್, ಮಾಜಿ ಅಧ್ಯಕ್ಷ ಬಿ. ರೇವಣ ಸಿದ್ಧಪ್ಪ ತಾ. ಕುರುಬ ಸಂಘದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ ಬಿ ರಾಜಶೇಖರ್, ತಾ ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ. ಜಡಿಯಪ್ಪ, ತಾ.ಪಂ. ಮಾಜಿ ಅಧ್ಯಕ್ಷರಾದ ಎಸ್.ಜಿ. ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್. ಶಿವಕುಮಾರ್, ಸಿಪಿಐಗಳಾದ ಕುಣೆ ಬಳಕೆರೆ ದೇವೇಂದ್ರಪ್ಪ, ಸಿದ್ಧೇಗೌಡ, ಸುರೇಶ್ ಸಗರಿ, ಪಿಎಸ್ಐಗಳಾದ ಭಾನುವಳ್ಳಿ ನಾಗರಾಜ್, ಎಸ್.ಆರ್. ಮಾರುತಿ, ಪ್ರವೀಣ್ ವಾಲಿಕಾರ್, ನಿವೃತ್ತ ಅಧಿಕಾರಿಗಳಾದ ಎಂ.ಬಿ. ಕರಿಯಪ್ಪ, ಭಾನುವಳ್ಳಿಯ ಜಿ. ಚಂದ್ರಪ್ಪ, ಕೊತ್ತಂಬರಿ ಸಿದ್ಧಪ್ಪ, ವೈ.ಎನ್. ರಂಗನಾಥ್, ಸುಭಾಷ್ ಚಂದ್ರ, ರಾಮಕೃಷ್ಣ ಆಸ್ಪತ್ರೆಯ ಡಾ. ಮಹೇಶ್, ಸ್ತ್ರೀ ರೋಗ ತಜ್ಞೆ ಡಾ. ಭಾರತಿ ರಂಗಸ್ವಾಮಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಂಡಿ ತಿಪ್ಪೇಸ್ವಾಮಿ, ವೈದ್ಯರಾದ ಡಾ. ಮಮತಾ, ಡಾ. ಪ್ರವೀಣ್, ಮುಖಂಡರಾದ ನಾಗೇನಹಳ್ಳಿ ಮಹಾಂತೇಶ್, ಬಿರೇಶ್, ಮಲ್ಲನಾಯ್ಕನಹಳ್ಳಿ ಅಶೋಕ್, ಕನಕ ನೌಕರರ ಸಂಘ ಗೌರವಾಧ್ಯಕ್ಷ ಪಿ.ಆರ್. ರಾಮಕೃಷ್ಣ ಪ್ರಧಾನ ಕಾರ್ಯದರ್ಶಿ ಕೆ.ಹೆಚ್. ನಿಜಲಿಂಗಪ್ಪ, ಕುಬೇಂದ್ರ ಮೆಕ್ಕಪ್ಪನವರ್, ಹೊನಕೇರಪ್ಪ ಮಂಜುನಾಥ್, ಕೊಕ್ಕನೂರು ಜಯಪ್ಪ, ಭಾನುವಳ್ಳಿಯ ಶಿವರಾಜ್, ಹೆಚ್ ಶಿವಕುಮಾರ್, ಜೆ ಆರ್ ಮಂಜುನಾಥ್, ಶರಣ್ ಕುಮಾರ್ ಹೆಗಡೆ, ಲಿಂಗರಾಜ್, ಡಿ.ಕೆ. ಕರಿಬಸಪ್ಪ, ರಾಮಪ್ಪ ಸೋಮಶೇಖರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.