ಪ್ರತಿಯೊಬ್ಬರಲ್ಲಿನ ಕೌಶಲ್ಯ ಹೊರತೆಗೆಯುವುದೇ ರಾ.ಸೇ.ಯೋಜನೆಯ ಉದ್ದೇಶ : ಪ್ರೊ. ಅಣ್ಣಯ್ಯ

ಪ್ರತಿಯೊಬ್ಬರಲ್ಲಿನ ಕೌಶಲ್ಯ ಹೊರತೆಗೆಯುವುದೇ ರಾ.ಸೇ.ಯೋಜನೆಯ ಉದ್ದೇಶ : ಪ್ರೊ. ಅಣ್ಣಯ್ಯ

ದಾವಣಗೆರೆ, ಸೆ. 26- ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ರಾಷ್ಟ್ರ ಪ್ರೇಮ, ಸೇವಾ ಮನೋಭಾವನೆಯನ್ನು ಬೆಳೆಸುವ ಒಂದು ದೊಡ್ಡ ಸಂಘಟನೆಯ ರಾಷ್ಟ್ರೀಯ ಸೇವಾ ಯೋಜನೆ ಪ್ರತಿಯೊಬ್ಬರಲ್ಲೂ ಕೌಶಲ್ಯವನ್ನು ಹೊರತೆಗೆಯುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಎಂದು ಎ.ಆರ್.ಎಂ.  ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ. ಅಣ್ಣಯ್ಯ ತಿಳಿಸಿದರು.

ಅವರು ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ 1969 ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ ನೀಡಲಾಯಿತು ಎಂದು ಅಣ್ಣಯ್ಯ ತಿಳಿಸಿದರು.

ಮತ್ತೋರ್ವ ಅತಿಥಿಗ ಳಾದ ಎಸ್. ಪರಮೇಶಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಪೂರ್ವಜ ಅಥವಾ ಮೊದಲ ರಾಷ್ಟ್ರ ಸೇವಾಧಿಕಾರಿ ಎಂದರೆ ಸಾಮ್ರಾಟ್ ಅಶೋಕ. ಏಕೆಂ ದರೆ ಆಗಿನ ಕಾಲದಲ್ಲಿ ಸಾಲು ಸಾಲು ಮರಗಳನ್ನು ನೆಡುವುದು, ಕೆರೆ-ಕಟ್ಟೆಗಳ ನಿರ್ಮಾಣ ಮೊದಲಾದ ಕೆಲಸಗಳನ್ನು ಮಾಡಿದ್ದರು ಎಂದು ತಿಳಿಸಿದರು. 

ಪ್ರಾಂಶುಪಾಲರಾದ ಜಿ.ಸಿ. ನೀಲಾಂಬಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ವಿಜಯ್ ಕುಮಾರ, ಡಾ. ಎಂ. ಮಂಜಪ್ಪ, ಪ್ರೊ. ಟಿ.ಆರ್. ರಂಗಸ್ವಾಮಿ, ಪ್ರೊ. ಜೆ. ತಾರಾ ರಾಣಿ, ಡಾ. ಕಾವ್ಯ, ಸುರೇಖಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿ ಡಾ. ಆರ್. ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿ ಮತ್ತು ಸ್ವಾಗತಿಸಿದರು. ಆಶಾ ನಿರೂಪಿಸಿದರು. ಡಾ. ಓ. ಪ್ರವೀಣ್ ವಂದಿಸಿದರು. 

error: Content is protected !!