ಮಳೆಗಾಗಿ ಪ್ರಾರ್ಥಿಸಿ ವಿನಾಯಕನಗರ ಕ್ಯಾಂಪಿನಲ್ಲಿ ಕಪ್ಪೆಗಳ ಮೆರವಣಿಗೆ

ಮಳೆಗಾಗಿ ಪ್ರಾರ್ಥಿಸಿ ವಿನಾಯಕನಗರ ಕ್ಯಾಂಪಿನಲ್ಲಿ ಕಪ್ಪೆಗಳ ಮೆರವಣಿಗೆ

ಮಲೇಬೆನ್ನೂರು, ಸೆ.25- ವಿನಾಯಕ ನಗರ ಕ್ಯಾಂಪಿನಲ್ಲಿ (ಜಿಗಳಿ ಕ್ಯಾಂಪ್) ಮಳೆಗಾಗಿ ಪ್ರಾರ್ಥಿಸಿ, ಸೋಮವಾರ ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿ, ಗಮನ ಸೆಳೆದರು.

ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಆರಂಭವಾದ ಮೆರವಣಿಗೆ ಸಂಜೆಯವರೆಗೂ ನಡೆಯಿತು. ಡೊಳ್ಳು ಸೇರಿದಂತೆ ವಿವಿಧ ಕಲಾ-ಮೇಳಗಳು ಮೆರವಣಿಗೆಗೆ ಮೆರಗು ತಂದವು. 20 ವರ್ಷಗಳ ನಂತರ ಗ್ರಾಮದಲ್ಲಿ ಈ ಕಪ್ಪೆಗಳ ಮೆರವಣಿಗೆಗೆ ಮಾಡಿದ ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಮಳೆ ಬಂದು ಎಲ್ಲರಿಗೂ ಖುಷಿ ನೀಡಿತು.

ಕಪ್ಪೆ ಕಮಿಟಿಯ ಕಟ್ಟಾ ನಾಗೇಶ್ವರಾವ್, ಬಿ.ಶ್ರೀನಿವಾಸ್, ಪಿ.ಹರಿಶೇಷಾದ್ರಿ, ಎನ್.ಸುರೇಶ್, ಎನ್.ಸತ್ಯನಾರಾಯಣ, ಇ.ಸತ್ಯನಾರಾಯಣ, ರಾಣಿ ಸತ್ಯಪ್ಪ, ಸೀತಾ ರಾಮಯ್ಯ, ವೈ.ಪ್ರಸಾದ್, ಕೆ.ರಮೇಶ್, ಎಂ.ವಿಷ್ಣುಮೂರ್ತಿ, ಟಿ.ಭಾಸ್ಕರ್ ರಾವ್ ಮತ್ತು ಮುಖಂಡರಾದ ಕೆ.ಸುಬ್ಬಾರಾವ್, ಹಲಗೇರಿ ಕರಿಬಸಪ್ಪ, ಸಿ.ಹೆಚ್.ಪ್ರಸಾದ್, ಸಿ.ಹೆಚ್.ಹರೀಶ್, ಎನ್.ರಾಮಕೃಷ್ಣ, ಎನ್.ಪ್ರಸಾದ್ ರಾವ್, ಕೆ.ಸೂರ್ಯ ನಾರಾಯಣ ರಾವ್, ಆರ್.ರಾಜರಾವ್ ಹಾಗೂ ಜಿಗಳಿ ಆನಂದಪ್ಪ, ಜಿ.ಮಂಜುನಾಥ್ ಪಟೇಲ್, ಬಿ.ಎಂ. ದೇವೇಂದ್ರಪ್ಪ, ಕುಂಬಳೂರಿನ  ನಾಗೋಳ್ ಕಲ್ಲೇಶ್, ಹರೀಶ್, ಕಿರಣ್, ಸಂತೋಷ್, ಅಶೋಕ್, ಮಲೇ ಬೆನ್ನೂರಿನ ಎಂ.ಕೆ.ಗಜೇಂದ್ರ ಸ್ವಾಮಿ, ಪೂಜಾರ್ ರಂಗನಾಥ್, ಮುದೇಗೌಡ್ರ ತಿಪ್ಪೇಶ್, ನಿಟ್ಟೂರಿನ ಧನುಂಜಯ, ಹನುಮೇಶ್, ಜಿಗಳಿಯ ಡಿ.ಆರ್.ಮಧುಸೂದನ್, ಬಿ.ಸೋಮಶೇಖರಚಾರಿ, ಡಿ.ಮಂಜುನಾಥ್, ಬೆಣ್ಣೇರ್ ನಂದ್ಯೆಪ್ಪ, ಬಿ.ನಿಂಗಾ ಚಾರಿ, ಭಾನುವಳ್ಳಿಯ ಗಂಗಪ್ಪ, ಪ್ರಶಾಂತ್, ರವಿ   ಇತರರು ಕಪ್ಪೆಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  

error: Content is protected !!