ದಾವಣಗೆರೆ, ಸೆ. 25- ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಳ್ಳ ಲಿರುವ ಅಂಗವಾಗಿ ಕರ್ನಾಟಕ ಸಂಭ್ರಮ 50, ಹೆಸರಾಯಿತು ಕರ್ನಾಟಕ ಉಸಿರಾಗಲಿ `ಕನ್ನಡ’ ಎಂಬ ಶೀರ್ಷಿಕೆಯಡಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ) ಮಾದರಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಮಾದರಿ ಲಾಂಛನಕ್ಕೆ 25,000 ರೂ.ಗಳ ನಗದು ಬಹುಮಾನವನ್ನು ನಿಗದಿಪಡಿಸಲಾಗಿದೆ. ಆಸಕ್ತರು ತಮ್ಮ ಕಲ್ಪನೆಯಲ್ಲಿ ಮೂಡಿಬಂದ ಲಾಂಚನದ ಮಾದರಿಯನ್ನು ಇದೇ ದಿನಾಂಕ 30 ರೊಳಗಾಗಿ ಕಳುಹಿಸಲು ಅವಕಾಶವಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ `https://kannadasiri.karnataka.gov.in/ ಸಂಪರ್ಕಿಸ ಬಹುದು.
July 24, 2024