ಅನ್ನವೆಂದರೆ ಮನುಷ್ಯನ ಜೀವನದ ಜೀವಧಾತು

ಅನ್ನವೆಂದರೆ ಮನುಷ್ಯನ ಜೀವನದ ಜೀವಧಾತು

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ಸೆ.25- ಅನ್ನವೆಂದರೆ ಮನುಷ್ಯನ ಜೀವನದ ಜೀವಧಾತು ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗೋಕರ್ಣೇಶ್ವರ ದೇವಸ್ಥಾನದ ಹತ್ತಿರ ಇರುವ ಸಂಸ್ಕೃತ ಸಭಾದ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ  ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಅನ್ನ ಸಂತರ್ಪಣೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರಾಣ ಮಹಾಕಾವ್ಯಗಳಲ್ಲಿ ಅನ್ನ ಪ್ರತಿಮೆ ಯಾಗಿ ಬಳಕೆಗೊಂಡಿದೆ. ಅನ್ನ ಬ್ರಹ್ಮ,
ಅನ್ನದಾತ ಅನ್ನ ಪೂರ್ಣೆಶ್ವರಿ, ಅನ್ನ ದಾಸೋಹ, ಅನ್ನದ ಋಣ ಎನ್ನುವ ಪದಗಳು ಅನ್ನಕ್ಕಿರುವ ಮಹತ್ವವನ್ನು ಹೇಳುತ್ತಿವೆ. ಶಿವಶರಣರು ದಾಸೋಹಕ್ಕೆ ಪ್ರಮುಖ ಆದ್ಯತೆ ನೀಡಿದ್ದಾರೆ. ಅನ್ನದಾನವನ್ನು ಮಹಾದಾನವೆಂದು ಪರಿಗಣಿಸ ಲಾಗುತ್ತದೆ. ಅನ್ನದಾನವನ್ನು ಮಾಡುವುದರಿಂದ ಜನ್ಮ ಜನ್ಮಗಳ ಪಾಪಗಳು ಕಳೆದು ಪುಣ್ಯ ಪ್ರಾಪ್ತವಾಗುತ್ತದೆ ಎಂದರು.

ಜನರ ಜೀವಗಳನ್ನು ಉಳಿಸಲು ಗಂಭೀರ ಅಪಘಾತಕ್ಕೊಳಗಾದ ಕೆಲವು ವಿಧದ ಶಸ್ತ್ರ ಚಿಕಿತ್ಸೆಗಳಲ್ಲಿ ರೋಗಿಗಳು ಅಥವಾ ಕಸಿಗಾಗಿ  ಸಾಮಾನ್ಯ ಪರೀಕ್ಷೆಯಂತಹ ಎಲ್ಲಾ ರೀತಿಯ ಆರೈಕೆಯಲ್ಲಿ ರೋಗಿಗಳಿಗೆ ರಕ್ತದಾನ ಅತ್ಯಗತ್ಯ. ರಕ್ತದಾನ ಮಾಡಲು ಅರ್ಹರಾಗಿರುವ ಶೇ. 90 ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡುವುದಿಲ್ಲ. ಆದ್ದರಿಂದ ಅರ್ಹ ವ್ಯಕ್ತಿಗಳು ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಿ ಎಂದರು.

ಈ ವೇಳೆ ಎ.ಎಂ.ವಿಶ್ವರಾಧ್ಯ, ಸೋಗಿ ವಾಗೀಶ್, ಎಚ್. ವಾಗೀಶ್, ಸುನೀಲ್ ಪಿ.ವಿ., ಗುರು ಎಸ್.ಎಂ., ವಿಜಯಕುಮಾರ, ಅಧಿಕಾರ್ ರಘು, ಮಾಡಿವಾಳ ರಘು, ಮನು, ಸದಾನಂದ, ಕೃಷ್ಣ ಕುಮಾರ, ನಾಗಾನಂದ ಶೆಟ್ರು, ಸಿದ್ದೇಶ, ಸಂತೋಷ, ಸಂಜು, ಚಿರಂಜೀವಿ, ಗಿರೀಶ ಸೇರಿದಂತೆ ಇತರರು ಇದ್ದರು.

error: Content is protected !!