ದಾವಣಗೆರೆ, ಸೆ. 24 – ಜಿ.ಎಂ. ಫಾರ್ಮಸಿ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಜಿಎಂ ಸಮೂಹದ ಅಧ್ಯಕ್ಷ ಜಿ.ಎಂ. ಲಿಂಗರಾಜು ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಎಂ. ಸಮೂಹದ ನಿರ್ವಾಹಕ ಶಿವಕುಮಾರ್ ಹಾಗೂ ಜಿಎಂಐಟಿ ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಉಪಸ್ಥಿತರಿದ್ದರು.
ಸಮಾರಂಭವನ್ನು ಉದ್ದೇಶಿಸಿ ಜಿ.ಎಂ. ಲಿಂಗರಾಜು ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ನಮ್ಮ ಸಮೂಹ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಯತ್ನಿಸುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಬೋಳಕಟ್ಟಿ ಸಂಸ್ಥೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಸುವ ಭರವಸೆಯನ್ನು ನೀಡಿದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಯೋಜಕ ಕೆ.ಯಸ್. ಕೇಶ್ವ, ಮೊಹಮ್ಮದ್ ಯುಸುಫ್ ದಮನಿ ,ರಾಕೇಶ್ ಎಸ್.ಎ ಹಾಗೂ ಎಂ. ಅಲಿಶಾ ಜೈನ್ ಭಾಗವಹಿಸಿದ್ದರು.