ಸಹಕಾರ ಬ್ಯಾಂಕುಗಳು ಬಡ ಮಕ್ಕಳ ಶಿಕ್ಷಣಕ್ಕೆ ಸಾಲ ಕೊಡಲಿ

ಸಹಕಾರ ಬ್ಯಾಂಕುಗಳು ಬಡ ಮಕ್ಕಳ ಶಿಕ್ಷಣಕ್ಕೆ ಸಾಲ ಕೊಡಲಿ

ರಾಣೇಬೆನ್ನೂರಿನ ಶಾಸಕ ಪ್ರಕಾಶ್ ಕೋಳಿವಾಡ ಮನವಿ

ರಾಣೇಬೆನ್ನೂರು, ಸೆ. 24 – ಇವ ನಮ್ಮವ ಎನ್ನುವ ಬಸವತತ್ವದಂತೆ ಎಲ್ಲ ಸಮಾಜದವರಿಗೂ ಸಹಾಯ, ಸಹಕಾರ ನೀಡುತ್ತಿರುವ ಈ ಬ್ಯಾಂಕ್‌ನವರು ಬಡ ಮಕ್ಕಳ ಶಿಕ್ಷಣಕ್ಕೂ ಸಾಲ ನೀಡಿ ಬಡ ಮಕ್ಕಳ ಬದುಕಿಗೆ ನೆರವಾಗು ವಂತೆ  ಆಡಳಿತ ಮಂಡಳಿಗೆ ಮನವಿ ಮಾಡಿದ ಶಾಸಕ ಪ್ರಕಾಶ್ ಕೋಳಿವಾಡ ಅವರು ಫೈಲಟ್ ಆಗುವ ಉತ್ಸಾಹಿ ಯುವಕರಿದ್ದರೆ ಅವರಿಗೆ ನೌಕರಿ ಕೊಡುವುದಾಗಿ  ಹೇಳಿದರು.

ಶಾಸಕರು ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ಶ್ರೀ ಬಸವೇಶ್ವರ ಅರ್ಬನ್ ಬ್ಯಾಂಕ್‌ ಶತಮಾನದ ಸಂಭ್ರಮದಲ್ಲಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಣಕಾಸು ಸಂಸ್ಥೆಗಳ ಸಾಲಗಾರರು ಸಮಯಕ್ಕೆ ಸರಿಯಾಗಿ  ಹಣವನ್ನ ಮರುಪಾವತಿ ಮಾಡಿದರೆ ಆ ಸಂಸ್ಥೆಗಳು ಬಹಳ ದಿನ ಬದುಕುತ್ತವೆ. ಈ ಬ್ಯಾಂಕಿನ ಸಾಲಗಾರರು ಪ್ರಾಮಾಣಿಕವಾಗಿ ನಡೆದುಕೊಂಡಿದ್ದರಿಂದ  ನೂರು ವರ್ಷಗಳ ಕಾಲ ಈ ಬ್ಯಾಂಕ್ ಜೀವಂತವಾಗಿದೆ.ಇದು ಈ ಬ್ಯಾಂಕ್‌ನ ಸಾಧನೆಯ ಮೈಲುಗಲ್ಲು. ಇದನ್ನು ಕಟ್ಟಿದ ಮಹನೀಯರು ಸ್ಮರಣೀಯರು ಎಂದು ಶಾಸಕ ಪ್ರಕಾಶ ಹೇಳಿದರು.

ಮಾಜಿ ಶಾಸಕ ಅರುಣಕುಮಾರ, ಚನ್ನೇಶ ಸೌಹಾರ್ದ ಅಧ್ಯಕ್ಷ ಕೆ.ಶಿವಲಿಂಗಪ್ಪ, ಜಿಪಂ.ಮಾಜಿ ಅಧ್ಯಕ್ಷ ಎಸ್.ಎಸ್.ರಾಮಲಿಂಗಣ್ಣನವರ ವಾಣಿಜ್ಯ ಸಂಸ್ಥೆ ಮಾಜಿ ಅಧ್ಯಕ್ಷ ವಿ.ಪಿ.ಲಿಂಗನಗೌಡ ಮಾತನಾಡಿದರು. 

ಲಿಂಗನಾಯ್ಕನಹಳ್ಳಿ  ವಿರಕ್ತ ಮಠದ ಚನ್ನವೀರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಬ್ಯಾಂಕ್ ಅಭಿವೃದ್ಧಿ ವೃದ್ದಿಸಲಿ ಎಂದು ಶುಭಕೋರಿದರು. 

ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರು ಸಹಕಾರಿ  ಇಲಾಖೆಯ ಅಧಿಕಾರಿಗಳು. ನಿರ್ದೇಶಕ ಮಂಜುನಾಥ ಓಲೇಕಾರ ಸ್ವಾಗತಿಸಿದರು. ಅಧ್ಯಕ್ಷ ಸಿ.ಆರ್.ಅಸುಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ತರಳಬಾಳು ಮಠದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭಕ್ಕೆ ಸಿರಿಗೆರೆಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಿಗ್ಗೆ ಬ್ಯಾಂಕ್‌ಗೆ ಆಗಮಿಸಿ ಸಮಾರಂಭ ಸ್ಮರಣೆಯ ಶಿಲಾಫಲಕವನ್ನ ಉದ್ಘಾಟಿಸಿ ದರು. ಮಾಜಿ ಶಾಸಕ ಅರುಣಕುಮಾರ ಜೊತೆಗಿದ್ದರು.

error: Content is protected !!