ರಾಣೇಬೆನ್ನೂರಿನ ಐದು ಬೃಹತ್‌ ಕೈಗಾರಿಕೆಗಳು : ಶಾಸಕ ಕೋಳಿವಾಡ

ರಾಣೇಬೆನ್ನೂರಿನ ಐದು ಬೃಹತ್‌ ಕೈಗಾರಿಕೆಗಳು : ಶಾಸಕ ಕೋಳಿವಾಡ

ರಾಣೇಬೆನ್ನೂರು, ಸೆ. 22 – ಸರ್ಕಾರದ ಚಿಂತನೆಯಂತೆ ಬೃಹತ್ ಪ್ರಮಾಣದ 5 ಕೈಗಾರಿಕೆಗಳು  ರಾಣೇಬೆನ್ನೂರಿಗೆ ಬರಲಿವೆ. ಈ ಕುರಿತು ಮುಖ್ಯಮಂತ್ರಿ  ಹಾಗೂ ಕೈಗಾರಿಕಾ ಮಂತ್ರಿಗಳ ಜೊತೆ ಚರ್ಚಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ಅವರು ತಾಲ್ಲೂಕು ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪೋಕನ್ ಇಂಗ್ಲಿಷ್ ಹಾಗೂ ಕಂಪ್ಯೂಟರ್ ನಾಲೇಜ್ ಇಲ್ಲದವರು  ಯಾವ ಪದವಿ ಪಡೆದರೂ ಉದ್ಯೋಗ ಸಿಗಲಾರದು ಕಾರಣ ಎಲ್ಲ ವಿದ್ಯಾರ್ಥಿಗಳು  ಈ ಬಗ್ಗೆ ತೀವ್ರ ಗಮನಹರಿಸಬೇಕು. ಸ್ವಾವಲಂಭಿ ಬದುಕು ನಡೆಸಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಶಾಸಕ  ಕೋಳಿವಾಡ ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಮಾತನಾಡಿ, ನಮ್ಮ ಜನಪದ, ನಮ್ಮ ಕಲೆ, ಸಂಸ್ಕೃತಿ ಮುಂತಾದವುಗಳನ್ನ ಉಳಿಸಿ ಬೆಳೆಸಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮವನ್ನು  ಏರ್ಪಡಿಸಿದ್ದು ಇದು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ತಾಲ್ಲೂಕು ಶಿಕ್ಷಣ ಸಂಸ್ಥೆಯ ಸೀತಾ ಸಾಹುಕಾರ, ಎಂ.ಡಿ. ದ್ಯಾಮಣ್ಣನವರ ಶಿಕ್ಷಕರ ವಿವಿದ ಸಂಘಟನೆಗಳ ಅದ್ಯಕ್ಷ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಶಾಸಕ ಪ್ರಕಾಶ ಓಲಂಪಿಕ್ ದ್ವಜಾರೋಹಣ ನಡೆಸಿ, ಚಕ್ರ ಎಸೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಕ್ರೀಡಾಜ್ಯೋತಿ ಬೆಳಗಿಸಿದರು. ಹಿಂದುಸ್ಥಾನ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಆನಂದ ಹುಲಬನ್ನಿ, ಜುಲ್ಪಿಕರ್ ಸೌದಾಗರ, ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!