ಹರಪನಹಳ್ಳಿಯಲ್ಲಿ ನಾಳೆ ನೂರು ಕೃತಿಗಳ ಲೋಕಾರ್ಪಣೆ , ರಾಜ್ಯ ಮಟ್ಟದ ಕವಿಗೋಷ್ಟಿ

ಹರಪನಹಳ್ಳಿಯಲ್ಲಿ ನಾಳೆ ನೂರು ಕೃತಿಗಳ ಲೋಕಾರ್ಪಣೆ , ರಾಜ್ಯ ಮಟ್ಟದ ಕವಿಗೋಷ್ಟಿ

ಹರಪನಹಳ್ಳಿ, ಸೆ. 22 – ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘದ ತಾಲ್ಲೂಕು ಘಟಕದ ಸಂಯಕ್ತ ಅಶ್ರಯದಲ್ಲಿ ಪಟ್ಟಣದ ತೆಗ್ಗಿನ ಮಠದ ಚಂದ್ರಶೇಖರ ಸ್ವಾಮಿ ಸಭಾ ಭವನದಲ್ಲಿ  ನಾಡಿದ್ದು ದಿನಾಂಕ 24 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನೂರು ಕೃತಿಗಳ ಲೋಕಾರ್ಪಣೆ  ಹಾಗೂ ರಾಜ್ಯ ಮಟ್ಟದ ಕವಿಗೋಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬರಹಗಾರರ ಸಂಘದ ರಾಜ್ಯಾಧ್ಯಾಕ್ಷ ಮಧುನಾಯ್ಕ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು,  ಕಾರ್ಯಕ್ರಮದಲ್ಲಿ ತೆಗ್ಗಿನ ಮಠದ  ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ  ಡಾ.ಮಹೇಶ ಜೋಶಿ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 125 ಜನ ಬರಹಗಾರರು, 140 ಕೃತಿಗಳೊಂದಿಗೆ ಹಾಜರಾಗಲಿದ್ದು, ರಾಜ್ಯ ಮಟ್ಟದ ಕವಿಗೋಷ್ಟಿಗೆ 40 ಜನ ಕವಿಗಳು, ಚಲನ ಚಿತ್ರನಟ ಮೈಸೂರು ರಮಾನಂದ ಸೇರಿದಂತೆ, ಇತರರು ಹಾಜರಾಗಲಿದ್ದಾರೆ ಎಂದು ತಿಳಿಸಿದರು. 

ರಾಜ್ಯ ಬರಹಗಾರರ ಸಂಘದ ಪ್ರಧಾನ ಕಾರ್ಯ ದರ್ಶಿ ವಿ.ಜಿ. ಅಗ್ರಹಾರ, ರಾಜ್ಯ ಬರಹಗಾರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಬಸವರಾಜ, ಕಾರ್ಯ ದರ್ಶಿ ಮಂಜುನಾಥ ಎಚ್.ಕೆ. ಸದಸ್ಯರಾದ ಕೊಟ್ರೇಶ.ಕೆ. ಶಾಂತಲಿಂಗಪ್ಪ ಟಿ, ಗಾಟಿನ ಮಂಜುನಾಥ ಸೇರಿದಂತೆ ಇತರರು  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!