ಎಸ್ಸೆಸ್ಸೆಂ ಜನ್ಮದಿನ : ಹರಿಹರದಲ್ಲಿ ರಕ್ತದಾನ ಶಿಬಿರ

ಎಸ್ಸೆಸ್ಸೆಂ ಜನ್ಮದಿನ : ಹರಿಹರದಲ್ಲಿ ರಕ್ತದಾನ ಶಿಬಿರ

ಹರಿಹರ, ಸೆ. 22 – ಹರಿಹರ ನನಗೆ ತವರು ಮನೆಯಂತೆ. ನಾನು ಬಾಲ್ಯದ ದಿನಗಳನ್ನು ಹರಿಹರದಲ್ಲಿ‌ ಕಳೆದಿದ್ದೇನೆ‌ ಎಂದು‌ ಎಸ್.ಎಸ್. ಕೇರ್ ಟ್ರಸ್ಟ್ ಅಧ್ಯಕ್ಷರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 56 ನೇ ಜನ್ಮದಿನದ ಪ್ರಯುಕ್ತ ನಗರದ ಶ್ರೇಯ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಆಯೋಜಿಸಿದ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವ್ಯಕ್ತಿ ಕನಿಷ್ಟ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇನ್ನೊಬ್ಬರ ಜೀವ ಉಳಿಸಲೂ ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ನೇತೃತ್ವದಲ್ಲಿ ಕಳೆದ ವರ್ಷ ನಡೆದ ಶಿಬಿರದಲ್ಲಿ ಹೆಚ್ಚು ಜನ ರಕ್ತ ದಾನ ಮಾಡಿ ತಾಲ್ಲೂಕಿನಲ್ಲಿ ದಾಖಲೆ ನಿರ್ಮಿಸಿದ್ದರು. ಈ ಬಾರಿಯು ಅವರ ನೇತೃತ್ವದಲ್ಲಿ ಹರಿಹರ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ನಡೆಯಲಿ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹರಳಹಳ್ಳಿ ಬಸಪ್ಪ, ನಂದಿಗಾವಿ ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷರಾದ ಎಲ್.ಬಿ.ಹನುಮಂತಪ್ಪ, ಎಂ.ಬಿ.ಅಬಿದ್ ಅಲಿ, ಮುಖಂಡರಾದ ಟಿ.ಮುರಗೇಶಪ್ಪ, ಹನುಮಂತಪ್ಪ ರೆಡ್ಡಿ, ಸೈಯದ್ ಸನಾವುಲ್ಲಾ ನಗರಸಭೆ
ಸದಸ್ಯರಾದ ಶಂಕರ್ ಖಟಾವಕರ್, ಬಾಬುಲಾಲ್ ಸಾಬಿರ್ ಅಲಿ, ಅರಿಫ್ ಅಲಿ, ಕೆ.ಪಿ. ಗಂಗಾಧರ, ಭೋವಿ ಕುಮಾರ್, ಸೈಯದ್ ಜಾಕೀರ್, ಬಿ.ಬಿ. ಮಲ್ಲೇಶ್ ಕಮಲಾಪುರ್, ಮಲ್ಲಿನಾಥ, ಶಿವಕುಮಾರ್ ಒಡೆಯರ್, ಭಾಗ್ಯದೇವಿ, ನಾಗಮ್ಮ, ಜಮಿಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!